Gireesh pm Giree

Children Stories Classics Inspirational

4.5  

Gireesh pm Giree

Children Stories Classics Inspirational

ಅಮ್ಮಾ ಜನುಮ ನೀಡಿದ ಜನುಮದಾತೆ.

ಅಮ್ಮಾ ಜನುಮ ನೀಡಿದ ಜನುಮದಾತೆ.

1 min
243


ಅಮ್ಮಾಅಮ್ಮಾ


ಜನುಮ ನೀಡಿದ ಜನುಮದಾತೆ, ಮಾತು ಕಲಿಸಿದ ಮಾತೆ , ಎದ್ದಾಗ ಬಿದ್ದಾಗ, ಗೆದ್ದಾಗ ಸೋತಾಗ ನೆರಳಂತೆ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಗಿದ್ದು ನನ್ನ ಈ ಪುಟ್ಟ ಹೃದಯದಲ್ಲಿ ಸದಾ ಪೂಜಿಸೋ ದೇವತೆ ನೀನು . ಅಮ್ಮ ಎನ್ನುವ ಎರಡಕ್ಷರದಲ್ಲಿ ಇಡೀ ಪ್ರಪಂಚ ಕಾಣಲು ಸಾಧ್ಯ. ಅತ್ತಾಗ ಒರೆಸೋ ಅವಳ ಕೈಗಳು ಕಣ್ಣೀರನ್ನು ಅರೆಕ್ಷಣದಲ್ಲಿ ಮಾಯವಾಗಿಸುವ ಮೋಡಿ ಅವಳಿಗೆ ಗೊತ್ತು. ನಕ್ಕಾಗ ನನಗಿಂತಲೂ ಹೆಚ್ಚೇ ನಕ್ಕವಳು. ತನ್ನ ಹೊಟ್ಟೆ ಹಸಿವಿಗೆ ತಾಳ ಹಾಕುತ್ತಿದ್ದರು ಕಂದ ಒಂದು ಹೊತ್ತು ಹಸಿವಿನಿಂದ ಇರಬಾರದೆಂದು ಸದಾ ಬಯಸುವವಳು. ನಿನ್ನ ಋಣಬಾರ ಹೆಗಲಮೇಲಿದೆ ಹೊರಲಾಗದಷ್ಟು .ಅದು ಏಳು ಜನುಮ ಎತ್ತಿ ಬಂದರು ತೀರಿಸಲು ಆಗದು . ಅಮ್ಮ ನಿನ್ನ ಬಗ್ಗೆ ಪದಗಳು ಕಟ್ಟಲು ಬಯಕೆ ನನಗೆ ಆದರೆ ನಾನೇನು ಮಾಡಲಿ ನಿನ್ನ ಬಗ್ಗೆ ಬರೆಯಲು ಹೊರಟರೆ ಪದಗಳೇಕೊ ಹುಡುಕಿದರೂ ಸಿಗದು . ಸಿಕ್ಕರು ಅವುಗಳಿಂದ ನಿನ್ನ ಹೊಗಳಲು ಸಾಧ್ಯವೇ ಎನ್ನುವ ಅನುಮಾನ.

  ಈ ಬಾಳೆಂಬ ಜ್ಯೋತಿಯ ಹಚ್ಚಿದವಳು ನೀನೆ ಸದಾ ಬೀಸು ಅಜ್ಞಾನ ಎನ್ನುವ ಗಾಳಿಯಿಂದ ರಕ್ಷಿಸಿ ಸುಜ್ಞಾನವೆಂಬ ಕಾಂತಿಯ ಹೊರಸೂಸಲು ಕಾರಣಕರ್ತೆ ನೀನೇ ತಾನೆ. ಏನೇ ಬದುಕಲ್ಲಿ ಎದುರಾಗಲಿ ಅದರಿಂದ ಹೊರಬರಲು ತುಂಬಾ ಸುಲಭ ಒಂದು ನಿನ್ನೊಳಗೆ ಸೋಲೆನು ಎನ್ನುವ ಛಲ ಇರಬೇಕು , ಇನ್ನೊಂದು ಸೋತರು ಆತ್ಮಬಲ ಕುಗ್ಗದೆ ಸೋಲೆ ಗೆಲುವಿನ ಮೆಟ್ಟಲೆಂದು ಹೋರಾಡಬೇಕು. ಇಲ್ಲಿ ನಿನ್ನ ಹೋರಾಟ ಮುಖ್ಯ. ಬದಲಾಗಿ ಹೇಡಿಯಂತೆ ಸೋಲು, ಕಷ್ಟಗಳಿಗೆ ಓಡಿ ಹೋದರೆ ಅದು ನಿನ್ನ ಹಿಂದೆ ಓಡಿ ಬರುತ್ತದೆ. ಅದನ್ನು ಎದುರಿಸಿದರೆ ಅದು ನಿನ್ನ ಕಾಲ ಕೆಳಗೆ ಬಿದ್ದು ಬಿಡುತ್ತದೆ . ಅಮ್ಮನ ಉಪದೇಶವನ್ನು ಆಗಾಗ ಕಷ್ಟ ಇರುವಾಗ ನೆನೆದರೆ ಸೋಲಿನ ದಡದತ್ತ ಹೋಗೋ ನನ್ನ ಗೆಲುವಿನ ತೀರದತ್ತ ಸೇರಿಸುತ್ತದೆ.

    ಜ್ಞಾನವೆಂಬ ಸಾಗರದಲ್ಲಿ ಪಯಣಿಸಲು ಅಕ್ಷರ ಎನ್ನುವ ದೋಣಿಯ ನಾವಿಕ ನೀನಾದೆ ಅಮ್ಮ ಮೊದಲು. ಅದಕ್ಕೇ ಅಲ್ವೇ ತಾಯಿಯೇ ಮೊದಲ ಗುರುವೆಂದು ಹೇಳಿರಲು ಹಿರಿ ತಲೆಗಳು.

   ಎಲ್ಲಾ ಹೆಣ್ಣು ಮಕ್ಕಳನ್ನು ಗೌರವಿಸಿ ಹೆಣ್ಣು ಬಾಳಿನ ಕಣ್ಣು ಬದುಕಿಗೆ ರೆಕ್ಕೆ ಪುಕ್ಕವನ್ನು ಕಟ್ಟುವವಳು ಅವಳೇ , ಹಾರಲು ಬಿಟ್ಟವಳು ಅವಳೇ, ಪ್ರಪಂಚ ಕದ ತೆರೆದವಳು ಅವಳೇ , ಹೆಣ್ಣು ನಿನ್ನ ಸೇವೆಗೆ ನಾನೆಂದೂ ಚಿರಋಣಿ. 






Rate this content
Log in