ಅಡಾಲ್ಫ್ ಹಿಟ್ಲರ್
ಅಡಾಲ್ಫ್ ಹಿಟ್ಲರ್


ಒಂದು ದೊಡ್ಡಹಡಗು. ಅದರಲ್ಲಿ ಬಹಳಷ್ಟು ಸೈನಿಕರು ಇದ್ದಾರೆ. ಜೊತೆಗೆ ಪ್ರಪಂಚಕ್ಕೆ ಚಿರಪರಿಚಿತ ವ್ಯಕ್ತಿ ಅಡಾಲ್ಫ್ ಹಿಟ್ಲರ್ ಇದ್ದಾನೆ. ಒಬ್ಬ ಪತ್ರಿಕೆಯವನು ಹಿಟ್ಲರ್ ನ ಕೇಳಿದ. ನೀವು ನಿಮ್ಮ ಸೈನ್ಯ ಅಂದರೆ ಬಹಳ ವಿಶಿಷ್ಟವಾದುದು ಅಂತ ಇಡೀ ಜಗತ್ತಿಗೆ ಗೊತ್ತಿದೆ. ನಿಮ್ಮ ಸೈನಿಕರು ನಿಜವಾಗಿಯೂ ಅಷ್ಟು ನಿಷ್ಠಾವಂತರಾಗಿರಲು ಸಾಧ್ಯವೇ ಅಂತ ಬಹಳ ಜನಕ್ಕೆ ಅನುಮಾನ ಎಂದ. ತಕ್ಷಣ ಹಿಟ್ಲರ್ ಒಬ್ಬ ಸಿಪಾಯಿಯನ್ನ ಕರೆದು ಕತ್ತಲಲ್ಲಿ ಸಮುದ್ರಕ್ಕೆ ಧುಮುಕು ಎಂದ ಮರುಮಾತಾಡದೆ ಧುಮಿಕೇ ಬಿಟ್ಟ. ಕೆಲವೇ ಸಮಯದಲ್ಲಿ ಮತ್ತೊಬ್ಬನನ್ನ ಕರೆದು ಧುಮುಕಲು ಹೇಳಿದ. ಅವನು ಮರುಮಾತಾಡದೆ ಹಾಗೇ ಮಾಡಿದ. ಪತ್ರಿಕೆಯವನಿಗೆ ಈಗ ನಿಜಕ್ಕೂ ಸೋಜಿಗವೆನಿಸಿತು. ಎದ್ದು ಹೋಗಿ ಅಲ್ಲೇ ದೂರದಲ್ಲಿದ್ದ ಕ್ಯಾಪ್ಟನ್ ಒಬ್ಬನನ್ನ ಕೇಳಿದ. ಏನಿದು ಹೀಗೆ ಯೋಚನೆಮಾಡದೆ ಬೀಳುತ್ತಿದ್ದಾರಲ್ಲ ಅಂದದ್ದಕ್ಕೆ ಕಿವಿಯಲ್ಲಿ ಹೇಳಿದ. ಈ ಹುಚ್ಚನ ಹತ್ತಿರ ಇರೋದಕ್ಕಿಂತ ಅದೇ ಮೇಲಲ್ಲವೇ ?