STORYMIRROR

Pushpa Prasad

Others

4  

Pushpa Prasad

Others

ತವರೂರ ದಾರಿ

ತವರೂರ ದಾರಿ

1 min
369


ಘಮ-ಘಮಿಸುವ ಕಾಫಿ ನಾಡಿನ ತಂಡಿ 

ಮಧ್ಯೆ ಬೆಸೆದಿದೆ ಮಮತೆ ವಾತ್ಸಲ್ಯದ ಕೊಂಡಿ 

ಅದ ಹೊಗಳುವುದಕೆ ನನಗೆ ಪದವಿಲ್ಲ ನೋಡಿ!!


ಕಿತ್ತಳೆ-ಮಾವು, ಗಣಿಕೆ -ಚಕ್ಕೆ , ಮೆಣಸು-ಮೆಂತೆ

ಬೇಕೆನಿಸುವುದು ಸವಿಯಲು ಮತ್ತೆ ಮತ್ತೆ 

ಹಣ್ಣು-ಸೊಪ್ಪಿಗಳಿಗಿಲಿಲ್ಲ ಯಾವುದೇ ಕೊರತೆ!!


ಕೈಬೀಸಿ ಕರೆದಿದೆ ನನ್ನ ತವರೂರ ದಾರಿ

ಮಲ್ಲಿಗೆ -ಸಂಪಿಗೆ, ಸುಗಂಧ ಪರಿಮಳ ಬೀರಿ 

ಮೈಮರೆಸಿದೆ ಹಕ್ಕಿಗಳ ಚಿಲಿಪಿಲಿ ನಿನಾದದ ಪರಿ!!


ನವಚೇತನದ ತಂಪು ತಂಗಾಳಿ ಹೊಮ್ಮಿ 

ಪ್ರೀತಿ-ಪ್ರೇಮ ಸ್ವಾದದ ಒಲವು ತುಂಬಿ

ಕೆಲ ಸಮಯ ತಂಗಿ ಕಾಲ ಕಳೆವೆ ನಾನಿಲ್ಲಿ!!


✍️ ಪುಷ್ಪ ಪ್ರಸಾದ್ ಉಡುಪಿ


Rate this content
Log in