ಸುನೀತಾ
ಸುನೀತಾ
ಸುನೀತಾ ಭಾರತದ ಹೆಮ್ಮೆಯ ನಾಯಕಿ
ರೆಕ್ಕೆ ಬಿಚ್ಚಿ ಗಗನಕ್ಕೆ ಹಾರಿದ ಸಹೋದರಿ
ಆಕಾಶದ ಉದ್ದಗಲ ಬಯಕೆಯ ತೋರಿಸಿ
ಸ್ತ್ರೀಕುಲದ ಶಕ್ತಿಯ ಲೋಕಕ್ಕೆ ಸಾರಿದ ನಾರಿ!!
ನವಮಾಸ ಹೊತ್ತು ಬಾಹ್ಯಾಕಾಶದಲಿ
ಭೂಮಿ ತಾಯಿಯ ಮಡಿಲಿಗೆ ಚಿತ್ತವ ನೆಟ್ಟು
ಸಂಕಷ್ಟವನ್ನು ಗೆದ್ದಳು ಸಹನೆಯಿಂದಲಿ
ಜಗದ ಕಂಗಳಿಗೆ ಬೆಳಕು ತಂದು ಕೊಟ್ಟು!!
ಬರೆದಿಟ್ಟಳು ಅಚ್ಚಳಿಯದ ಇತಿಹಾಸ-ಚರಿತೆ
ಸಾಧನೆಯ ಉತ್ತುಂಗದಲಿ ವೀರವನಿತೆ
ಮುಗಿಲಲಿ ತೇಲುತ್ತಾ ಬಂದ ಅದ್ಭುತ ಕಥೆ
ವರ್ಣಿಸಿದಷ್ಟು ಬೆಳೆವುದು ಇವಳ ಸಾಹಸಗಾಥೆ!!
ತೆರೆಯಿತು ಹೊಸ ಲೋಕದ ಮನ್ವಂತರ
ಭುವಿಯ ಮಣ್ಣಲ್ಲಿ ಬೀರಿತು ಸಂತಸದ ಹಂದರ
ಜಗದ ಮಗಳಿಗೆ ಎಲ್ಲೆಲ್ಲೂ ಹರ್ಷೋದ್ಘಾರ
ಇದುವೇ ಜೀವನದ ಸಾಕ್ಷಾತ್ಕಾರ!!
✍️ ಪುಷ್ಪ ಪ್ರಸಾದ್
