ಸ್ನೇಹದ ಸಿಹಿಗಾಳಿ
ಸ್ನೇಹದ ಸಿಹಿಗಾಳಿ
1 min
148
ಸ್ನೇಹದ ಸಿಹಿ ಉಣಿಸಿ
ದೂರಾಗಲು ಸಾಧ್ಯವೇ?
ನಿನ್ನ ಸ್ನೇಹಕೆ ಸೋತು
ನಾ ಮೂಕಳಾಗಿರುವೆ!!
ನೋಡುತ ಮಾಡಿದ
ಸ್ನೇಹದ ಹಸ್ತಾಕ್ಷರ
ಅಳಿಯದಂತೆ ಉಳಿಸಿದೆ
ಸ್ನೇಹದ ಉಸಿರ!!
ನಿನ್ನ ಕಣ್ಣಿನ ಸುರುಳಿಯಲ್ಲಿ
ನನ್ನೇಕೆ ಸೆರೆ ಹಿಡಿದೆ?
ಪಿಸುಮಾತಿನ ನುಡಿಯಲ್ಲಿ
ನಾ ಕರಗಿ ಹೋದೆನೆ?
ಒಂದು ಸುಂದರ ಸಂಜೆ
ನೀನಾಡಿದ ಪಿಸು ಮಾತು
ಮುದ್ದಾದ ಮಾತಿನಲಿ
ಮೌನದ ಸಿಹಿಗಾಳಿ!!
✍️ ಪುಷ್ಪ ಪ್ರಸಾದ್ ಉಡುಪಿ
