Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Others

4.5  

Prabhakar Tamragouri

Others

ಸಿಕ್ಕೀತೇ ಹರುಷ.......?

ಸಿಕ್ಕೀತೇ ಹರುಷ.......?

1 min
161


ಸಿಕ್ಕೀತೇ ಹರುಷ ??

ಹೊಸ್ತಿನಲಿ ಕುಳಿತು ಬಾಳ ಪುಟಗಳನ್ನು 

ಒಮ್ಮೆ ತಿರುಗಿಸಿ ನೋಡಿ 

ಎಲ್ಲಿ ಸಿಕ್ಕಿದೆ ಹರುಷ ಎಲ್ಲರಿಗೂ

ಬುದ್ಧ ಹುಡುಕಲಿಲ್ಲವೇ 

ದಟ್ಟ ಕಾನನ ಹೊಕ್ಕು 

ಸಾಧು ಸಂತರು ಅರಸಲಿಲ್ಲವೇ 

ಮಂಜು ಮುಸುಕಿದ ಶುಭ್ರ ಹಿಮಾಲಯದಲ್ಲಿ

ಸಿಕ್ಕು ! ಕಾಣ ಬಯಸಲಿಲ್ಲವೇ 

ಕದಳೀ ವನದಲ್ಲಿ 

ವಿಷದ ಬಟ್ಟಲಲ್ಲಿ 

ಇದೆಯಾ ಎಂದು ನೋಡಲಿಲ್ಲವೇ .....?

ಹೌದು , ಹರುಷವೊಂದು ಮರೀಚಿಕೆಯಂತೆ 

ಬೆನ್ನು ಹತ್ತುವವರೇ ನಾವೆಲ್ಲಾ ಓಡಿದಷ್ಟು

ಮುಂದೆ ಹಿಡಿಯಲು ಹಿಂದೆ ಕಾಣದಿರುವುದನ್ನು

ಕೈಚಾಚಿ ಇರುವುದೆಲ್ಲವ ಬಿಟ್ಟು 

ನಮ್ಮ ತನ ಸುಟ್ಟು ಅರಸುತ್ತಿಲ್ಲವೇ

ಸಾಯುವ ತನಕ ಒಮ್ಮೆಯಾದರೂ

ನೆನೆಯಬಾರದೇ ಆ ಭಗವಂತನಲ್ಲಿ

ಮನವಿಟ್ಟು ಈ ಬಂಧನವ ಬಿಟ್ಟು .....


Rate this content
Log in