ಪ್ರಥಮ ಪ್ರಸ್ತಾವನೆ
ಪ್ರಥಮ ಪ್ರಸ್ತಾವನೆ

1 min

42
ಪ್ರೇಮ ಪ್ರೀತಿ ಪ್ರಣಯ
ಪ್ರಸಂಗಗಳ ಪರಿಗಣಿಸಿರುವೆ
ಪರಿಸರ ಪ್ರಕೃತಿ ಪ್ರಭಾವ
ಪರಿಕಲ್ಪನೆಯ ಪ್ರಸ್ತಾಪಿಸಿರುವೆ
ಪ್ರಿಯಕರ ಪ್ರೇಯಸಿ ಪ್ರಮದೆ
ಪರಿಭಾಷೆಯ ಪರಿಚಯಿಸಿರುವೆ
ಪದಗಳಿಗೆ ಪರದಾಡದೆ
ಪ್ರಾಸಗಳ ಪೋಣಿಸಿರುವೆ
ಪ್ರಥಮ ಪ್ರಯೋಗ
ಪ್ರಸ್ತುತ ಪಡಿಸಿರುವೆ
ಪ್ರಾಮಾಣಿಕ ಪ್ರಯತ್ನವ
ಪರಿಗಣಿಸಲು ಪ್ರಾರ್ಥಿಸುವೆ