ಪ್ರಕಾಶಿಸು ಬೆಳಕ ಮನವೇ
ಪ್ರಕಾಶಿಸು ಬೆಳಕ ಮನವೇ
1 min
149
ಮನಸೇ ನೀ ಹೆಣೆಯದಿರು ಸುತ್ತಾ
ಇಲ್ಲ ಸಲ್ಲದ ಆಲೋಚನೆಗಳ
ಮನವೇ ನೀ ಎಲ್ಲೂ ಹೋಗದಿರು
ನಿನ್ನದಲ್ಲದ ಯಾವುದೇ ಸ್ಥಳಕ್ಕೆ!!
ಬಲೆಯಲ್ಲಿ ಸಿಲುಕಿದ ಮೀನಿನಂತಾಗಿದೆ
ಬೇಕು ಬೇಡದ ಯೋಚನೆಗಳು
ಉಸಿರಾಡಬೇಕು ಸಲೀಸಾಗಿ ಮನವೇ
ಯಾವೂರ, ಯಾರೊಬ್ಬರ ತಕರಾರಿಲ್ಲದೆ!!
ಕೊಳಕನ್ನು ತೊರೆದು ಹಸನಾಗು ಮನವೇ
ಕಸವನ್ನೆಲ್ಲಾ ತೆಗೆದು ಚೊಕ್ಕವಾಗಿ
ನಿನ್ನೊಳಗಿನ ಬೆಳಕು ಚೆಲ್ಲುತ್ತಲ್ಲೇ
ಪ್ರಕಾಶಿಸು ಬೆಳಕ ಮನವೇ!!
ಕಿವುಡಾಗಿಬಿಡು ಮನವೇ
ಅವಿವೇಕಿಗಳ ಹೊಲಸು ಮಾತಿಗೆ
ಧ್ವನಿಯಾಗು ನೀ ಮನವೇ
ನೊಂದು ಬೆಂದ ಜೀವಗಳಿಗೆ!!
✍️ ಪುಷ್ಪ ಪ್ರಸಾದ್
