ನನ್ನೇ ಮರೆತೆ ನಾ
ನನ್ನೇ ಮರೆತೆ ನಾ
1 min
102
ಜಿನುಗಿದ ಮಳೆಯ
ಹನಿಯಲಿ
ಹೃದಯದ
ಪುಟದಂಚಲಿ
ತಂಪೆರೆದ
ತಂಗಾಳಿಯಲಿ
ನನ್ನೇ ಮರೆತೆ ನಾ....
ಸಾಹಿತ್ಯದ
ಗೆಳೆತನದಲಿ
ಲೇಖನಿಯ
ಒಲುಮೆಯಲಿ
ಪದಗಳ
ಸ್ವರದಲ್ಲಿ
ನನ್ನೇ ಮರೆತೆ ನಾ......
ಕಾಣದ
ಕಲ್ಪನೆಯಲಿ
ಕಂಡ
ಮಮತೆಯಲಿ
ಕಾಣುವ ನಾಳಿನ
ಕಂಪಿನಲಿ
ನನ್ನೇ ಮರೆತೆ ನಾ.....
ಸ್ವಪ್ನದಲಿ
ಮಾಧುರ್ಯದಲಿ
ಮಮಕಾರದಲಿ
ಭಾವನೆಯಲಿ
ನನ್ನೇ ಮರೆತೆ ನಾ.........!
