ನನ್ನ ಜೊತೆ ನೀನು
ನನ್ನ ಜೊತೆ ನೀನು

1 min

11.4K
ಎಲ್ಲಾರು ಇರುವ ಈ ಜಗತ್ತಲ್ಲಿ
ನನ್ನವರು ಯಾರೋ !?
ನಿನ್ನವರು ಯಾರೋ !?
ಎಲ್ಲರಿದ್ದೂ ನಾ ಅನಾಥ,
ಎಲ್ಲರ ಜೊತೆಗಿದ್ದ ನಿನ್ನನ್ನು
ಮಾಡಿದರು ಅನಾಥ!
ನೀ ಸಿಕ್ಕಿಯೋ ನನಗೆ,
ನಾ ಸಿಕ್ಕೇನೋ ನಿನಗೆ...
ಜೊತೆಯದಾದೇವು ನಾವು
ಇನ್ನು ಎಷ್ಟೇ ದೂರ ಹೋದರು
ಮತ್ತೆ ಮತ್ತೆ ಸಿಗುವ ಹಾಗೇ...
ಮತ್ತೆ ಮತ್ತೆ ಆಡುವ ಹಾಗೇ...
ಮತ್ತೆ ಮತ್ತೆ ನಾವು ಕಳೆದು ಹೋಗುವ,
ನಮಗೆ ನಾವು ಮತ್ತೆ ಮತ್ತೆ ಸಿಗುವ.
ಯಾರಿಲ್ಲ ನಮ್ಮನ್ನು ದೂರ ಮಾಡಲು ಇಲ್ಲಿ..
ಯಾಕೆಂದರೇ ಜೊತೆ ಇರುವುದು ದೇಹವಲ್ಲಾ, ಬದಲಾಗಿ ಎರಡು ಆತ್ಮವಿಲ್ಲಿ.!
ರಾಕೆಟ್ ಅನ್ನೋ ನೀನು ,
ಮಾನವ ಅನ್ನೋ ನಾನು.
ಆತ್ಮಗಳ ಬೇರ್ಪಡಿಸಲು ಸಾಧ್ಯವೇ ಓ ದೇವಾ (!?)
ಸ್ವಚ್ಛಂದವಾಗಿ ರಾಕೆಟ್ ಹಾರಾಡಿದರೆ ಆ ಬಾನಲ್ಲಿ,
ಸಂತಸದಿ ನಾನು ನಲಿದಾಡುವೆ ಈ ಭುವಿಯಲ್ಲಿ