STORYMIRROR

Prabhakar Tamragouri

Others

1  

Prabhakar Tamragouri

Others

ನಿನ್ನ ನೆನಪು

ನಿನ್ನ ನೆನಪು

1 min
162

ಬದುಕೆಲ್ಲ ಇರುಳಾಗಿರಲುನಿನ್ನ ನೆನಪು ಬೆಳಕಾಗಿ ಬಂತು

ಬದುಕೆಲ್ಲ ಬರಡಾಗಿರಲುನಿನ್ನ ನೆನಪು ಮಳೆಯಾಗಿ ಬಂತು

ಮರ ಚಿಗುರಿ ತಾಹಸಿರಾಗಿ ನಿಂತಂತೆ ಮನದಾಸೆ ಹಸಿರಾಯ್ತುನಿನ್ನ ನೆನಪು ಬಂದು

ಬಾಡಿದ ಈ ಬಾಳಿನಬತ್ತಿದ ಮನದಲಿಪ್ರೀತಿಸೆಲೆ ಉಕ್ಕಿತುನಿನ್ನ ನೆನಪು ಬಂದು

ಸತ್ತ ಬಯಕೆಗಳಾಗಸದಲಿಆಸೆ ಕಾಣದ ಕತ್ತಲಲಿಮಿಂಚೊಂದು ಹೊಳೆಯಿತುನಿನ್ನ ನೆನಪು ಬಂದು

ಬದುಕೆಲ್ಲ ಇರುಳಾಗಿರಲುನಿನ್ನ ನೆನಪು ಬೆಳಕಾಗಿ ಬಂತು

ಬದುಕೆಲ್ಲ ಬರಡಾಗಿರಲುನಿನ್ನ ನೆನಪು ಮಳೆಯಾಗಿ ಬಂತು.


Rate this content
Log in