ನೆನಪು ತಂದವಳ ಬಗ್ಗೆ ......
ನೆನಪು ತಂದವಳ ಬಗ್ಗೆ ......
ಇಳಿ ಸಂಜೆ ಹೊತ್ತು
ಮಳಲು ದಂಡೆಯ ಮೇಲೆ ನಿಂತ
ಅವಳ ಸುಂದರ ಮೊಗದಲ್ಲಿ
ನಗೆಯ ಹೊನಲು ಚಿಮ್ಮಿ
ತುಂಟ ಕೆನ್ನೆಗೆ ಮುಂಗುರುಳು
ಮುತ್ತಿಡುವ ಸಮಯಯದಲಿ
ಜಾರುವ ಮುತ್ತುಗಳು
ಕೆಳಗುರುಳಿ ಪುಟಿಯುತ್ತಿವೆ.
ಬದುಕಿರದ , ಬದುಕುವ
ಬಯಲಿನ ಆಳದಲ್ಲಿ
ಬಂದು ನಿಂತವಳು
ಬಾನಾಕಾಶದಲ್ಲಿ ಹಕ್ಕಿಯಂತೆ
ರೆಕ್ಕೆ ಬಿಚ್ಚಿ ಹಾರುವ ಮನಸ್ಸು....!
ಚಿತ್ತ ಚಿತ್ತಾರದ ಬಣ್ಣ ಬಳಿದು
ಕಮರಿದ ಬದುಕಿನಲಿ
ಪುಟಿದೇಳುವ ತುಡಿತಕ್ಕೆ
ಲಗ್ಗೆ ಇಟ್ಟು
ಹುಚ್ಚು ಕನಸುಗಳ
ಭೇಕರ ಸೆಳೆತದೊಳಗೆ
ಮಿಂಚು ಸಂಚರಿಸಿದಂತಾಗಿ
ನರನಾಡಿಗಳ , ಮೈಮನಗಳ
ಸುಳಿದಾಟದಲಿ........
ಅವಳ ಬಗ್ಗೆ ತಿಳಿದವರಾರು....?
ಬದುಕು ಧ್ವನಿಸುತ್ತಿದೆ ಮತ್ತೆ ಮತ್ತೆ......
ಮೌನ ,
ಕನಸು ಸುಂದರಗೊಳಿಸಿ
ನೆನಪು ತಂದವಳ ಬಗ್ಗೆ......
