ನೆಲೆ ?
ನೆಲೆ ?
1 min
154
ನೆಲೆಯಿಲ್ಲದ ಬದುಕಿಗೆ ಸೂರೆಕೆ?
ಬಯಲಾದ ಗಾಳಿ,ಬೆಳಕಿಗೆ ನೆಲೆ ಉಂಟೆ?
ಅವನೊಂದು ತಿಂಗಳಾದರೆ?
ನಾನೊಂದು ಮುಗಿಲಾಗಲೆ?
ಬಾನತುಂಬ ತಾರೆಗಳ ದಂಡು
ಹೊತ್ತಿ ಉರಿದರೆ ನೆಲೆಯುಂಟೆ?
ರವಿ ಮರೆಯಾದ ಕ್ಷಣವೇ
ಹೆಣಗಳಾ ರಾಶಿಯ ರಂಗು
ಹೂತವರಿಗೆ ಸಿಗದಾ ಗುರುತು?
ನೆಟ್ಟ ಕಲ್ಲುಗಳು ಅದಲಿ ಬದಲಿ.!
ಯಾರ ತಿಥಿ ಯಾರಿಗೋ ಗೊತ್ತಿಲ್ಲ
ಕಂಗಳು ಕಣ್ಣೀರ ಪಾಲಾದರೇ?
ಉಳಿಸಿ ನೆಲೆಯಾದವರು ಯಾರು ಇಲ್ಲ.
ಬತ್ತಿದ ಬಾಳಿಗೆ ಬೆಳಕಿಲ್ಲ ....!.
ನೆಲೆ ಹುಡುಕ ಹೊರಟವರು
ನೆಲ ಸಮವಾದರಲ್ಲ....!!
ಗಾಳಿಗುಂಟ ದೂರವಾದವರು
ಹೂಳಿಟ್ಟ ತಂತ್ರ ಬಲ್ಲವರು.
ನೆಲವನರಸಿ ನೆಲಕುರುಳಿದರು.
