STORYMIRROR

Prabhakar Tamragouri

Others

2  

Prabhakar Tamragouri

Others

ಮರೆಯಾಗದ ಚಿತ್ರಗಳು

ಮರೆಯಾಗದ ಚಿತ್ರಗಳು

1 min
92

ಮನೆಯ ಗೋಡೆಯ ಮೇಲೆ

ಮೆಲ್ಲ ಮೆಲ್ಲನೆ ಹರಿದು ಬರುವ 

ಮೋಡದ ನೆರಳಿನ ಗುರುತು

ನೆನಪುಗಳ ಹಾಗೆ

ಮರೆಯುವುದೂ ಇಲ್ಲ ......

ಕರಗುವುದೂ ಇಲ್ಲ .,,,,


ಮಳಲ ಮೇಲೆ 

ದಿಗಂತ ನೋಡುತ್ತಾ ಕೂತ

ಬಸವಳಿದ ಹುಡುಗನ ಕಂಗಳು

ಎದೆಯ ಮೇಲೆಳೆದ 

ಗೆರೆಯ ಹಾಗೆ

ಮರೆಯಾಗುವುದಿಲ್ಲ.......

ಕರಗುವುದಿಲ್ಲ ........


ಬಾನು ಸುರಿದ ಗಳಿಗೆ

ಬೆಚ್ಚಗಿನ ಮಡಿಲು ಕೊಟ್ಟಾಕೆ

ಕಥೆ ಕಟ್ಟಿ ಹೇಳಿ

ಸೆರೆಗ ತುದಿಯಿಂದ

ಕಣ್ಣೊರೆಸಿಕೊಂಡ ಕ್ಷಣ

ನನ್ನ ಬತ್ತಿದ ಬಾವಿಗಳೊಳಗಿನ್ನೂ

ಅಚ್ಚೊತ್ತಿದ ಚಿತ್ರದಂತೆ

ಸುರಿಯುವುದಿಲ್ಲ .....

ಕರಗುವುದಿಲ್ಲ .......


Rate this content
Log in