ಮಾಸದ ನೆನಪುಗಳು
ಮಾಸದ ನೆನಪುಗಳು
ನಂದುತಿರುವೆನು ನಾನು
ಮಹಾ ಬೆಳಕು ಮೂಡಿಸಿ
ನೊಂದಿರುವೆನು ನಾನು
ಮಹಾ ಪಯಣ ಮುಗಿಸಿ!!
ಎಲ್ಲಾ ಸ್ವಾಗತಿಸಿದರು ಅಂದು
ನನ್ನ ಆಗಮನದ ನಶೆಯಲ್ಲಿ ಕುಣಿದು
ಬದುಕಿನ ಚಂಚಲೆಯ ಹೊದ್ದು
ಪ್ರಯಾಣದಲ್ಲಿ ಮಿಂದೆದ್ದು!!
ನಾ ಬರುವ ದಾರಿಗಾಗಿ ಕುಳಿತರು
ಪ್ರಯಾಣದ ಅನುಕೂಲತೆಗೆ ಕಾದು
ಸಕಲರಿಗೂ ನಾ ಶುಭ ತರಲೆಂದು
ಹಾರೈಸಿದರಂದು ಕೈ ಕೈ ಹಿಡಿದು!!
ಶಾಲಾ ಮಕ್ಕಳಿಗೆ ಪ್ರಯಾಣದ ಮಜ ಕೊಟ್ಟೆ
ಒಂದಿಷ್ಟು ಪೋಷಕರಿಗೆ ನೆಮ್ಮದಿಯ ಕೊಟ್ಟೆ
ನಗುತಾ ನಲಿಯುತಾ ದುಡಿದೆ ನಾನಂದು
ನಿಂತಲ್ಲೇ ಬಳಲಿ ಬೆಂಡಾಗಿರುವೆನು ನಾನಿಂದು!!
ನನ್ನೀ ಪಯಣ ಮುಗಿಸಿ ಹೊರಡುತ್ತಿರುವೆನು
ಬರುತ್ತಿರುವನು ನನ್ನ ಮುಂದಿನವನು
ಹಲವೆಡೆ ಸಿದ್ದಗೊಂಡಿವೆ ನನ್ನ ವಿದಾಯಕ್ಕೆ ಔತಣಗಳು
ನನ್ನ ಮುಂದಿನವನ ಸ್ವಾಗತಕ್ಕೆ ತೋರಣಗಳು!!
✍️ ಪುಷ್ಪ ಪ್ರಸಾದ್