ಕಾಡುತಿದೆ ನಿನ್ನ ನೆನಪು
ಕಾಡುತಿದೆ ನಿನ್ನ ನೆನಪು
ಯಾವ ಕವನ ಬರೆಯಬೇಕು
ನಿನ್ನ ಪ್ರೀತಿ ಮಾಡಲು
ಯಾವ ಬರಹ ಓದಬೇಕು
ನಿನ್ನ ಹೃದಯ ಸೇರಲು!!
ಯಾವ ದಾರಿ ಆಯ್ಕೆ ಮಾಡಬೇಕು
ನಿನ್ನ ಸ್ನೇಹ ಮಾಡಲು
ಯಾರ ಬಳಿ ಕೇಳಬೇಕು
ನಿನಗೆ ಮನಸು ಕೊಡಲು!!
ನಾ ಹೇಗೆ ಹಾಡಬೇಕು
ನಿನ್ನ ನಾ ಪಡೆಯಲು
ನಿನ್ನ ಹೇಗೆ ಪ್ರೀತಿಸಬೇಕು
ನಿನ್ನ ಮರಳು ಮಾಡಲು!!
ನಿನ್ನ ಮಾತು ಮೈತ್ರಿ ಸಂಘದೊಳು
ಮುಳುಗಿ ಹೋಗಿದೆ ನನ್ನ ಮನಸು
ತೋಚುತ್ತಿಲ್ಲ ಹೇಳಲು ಏನೊಂದು
ನಿನ್ನ ಸನಿಹ ಕರೆತರಲು!!
ಪ್ರೀತಿ ಪ್ರೇಮವೇ ಬದುಕು
ಎಂದು ನಂಬಿ ಕುಳಿತಿರುವೆನು
ಕಾಯುತಿರುವೆನು ನಾನು
ಒಲವ ಪ್ರೀತಿ ಹರಿಸಲು!!
ದುಂಬಿ ಜೇನ ಹೀರುವಂತೆ ಹೂ
ಬಯಸಿದೆ ಮನ ನಿನ್ನ ಕಾಣಲು
ದುಂಬಿಯನ್ನು ದೂರ ದೂಡಿಬಿಡು
ಮಧುರ ಪ್ರೀತಿಯ ಮಳೆ ಸುರಿಸು!!
ಕಾಡುತಿದೆ ನಿನ್ನದೇ ನೆನಪು
ಕತ್ತಲ ಲೋಕದ ಕನಸಲ್ಲೂ
ನಾನೇನು ಮಾಡಬೇಕು ನೀನೆ ಹೇಳು
ಆ ಕನಸು ನನಸು ಮಾಡಲು!!
✍️ ಪುಷ್ಪ ಪ್ರಸಾದ್