ಆನಂದ
ಆನಂದ
1 min
223
ಕಲ್ಪನೆಯ ಕನಸಲ್ಲಿ
ಎರೆಡು ಮನಸುಗಳು ಬೆಸೆದರೆ
ಎಂತಹ ಆನಂದ!!
ಪ್ರಕೃತಿಯ ಮಡಿಲಲ್ಲಿಚಿ
ಲಿಪಿಲಿ ಹಕ್ಕಿಗಳ ಇಂಚರ
ಎಂತಹ ಆನಂದ!!
ಹಾಲಿನ ಹೊಳೆಯಲ್ಲಿ
ಜೇನಿನ ಮಳೆ ಸುರಿದರೆ
ಎಂತಹ ಆನಂದ!!
ಹರಿಯುವ ನದಿ ತೊರೆಗಳಲಿ
ದುಮ್ಮಿಕ್ಕಿ ಚೆಲ್ಲುವ ಹಾಲ್ನೊರೆ
ಎಂತಹ ಆನಂದ!!
ಉಸಿರು ಉಸಿರಲಿ ಬೆರೆತು
ಮಿಡಿವ ಹೃದಯಗಳು ಒಂದಾದರೆ
ಎಂತಹ ಆನಂದ!!
ಕಷ್ಟ ಸುಖಗಳಲಿ ಒಟ್ಟಾಗಿ
ಬದುಕಿನ ಬಂಡಿ ಸಾಗಿದರೆ
ಎಂತಹ ಆನಂದ!!
ಈ ಅರಿತು ಬೆರೆತು ಬಾಳುವ
ಸಂಬಂಧ ನಮ್ಮದಾದರೆ
ಎಂತಹ ಆನಂದ!!
✍️ ಪುಷ್ಪ ಪ್ರಸಾದ್