ಬಾರೋ ನನ್ನ ನಲ್ಲ
ಬಾರೋ ನನ್ನ ನಲ್ಲ
ನಿನ್ನ ಕಣ್ಣಂಚಿನ ಭಾವ ಸೆಳೆದಿದೆ ತನುವ
ಕುಡಿನೋಟದ ಸೆಳೆತಕೆ ಸೋತಿದೆ ಮನ
ರೆಪ್ಪೆಗಳು ಬಾ ಎಂದು ಕರೆದಿವೆ ಒಲವ
ಹೃದಯವು ಹಾತೊರೆದಿದೆ ಪ್ರೀತಿಯ!!
ಹೃದಯದಿ ತುಂಬಿದೆ ಮೌನದ ಮಾತು
ಮೆಲ್ಲನೆ ಗುನುಗುತಿದೆ ನಿನ್ನ ಹೆಸರನ್ನು
ನಲಿದಾಡುವ ಆ ನಿನ್ನ ಮುಂಗುರುಳು
ಕೂಗಿ ಕರೆಯುತಿದೆ ಬಾ ನನ್ನತ್ತಿರ ಎಂದು!!
ಕನಸಲ್ಲಿ ಬಂದು ಮನದಲ್ಲಿ ನೆನೆಸಿರುವೆ
ತಂಗಾಳಿಯಂತೆ ಬಿಸಿಯುಸಿರ ಬೀಸಿರುವೆ
ಎಲ್ಲಿಂದಲೋ ಬಂದು ಮನವ ಕದ್ದಿರುವೆ
ಮರೆಯಲಿ ಬಂದು ಒಲವ ತೋರಿಸಿರುವೆ!!
ಅಂತರಾಳಕು ಮೀರಿದ ಪ್ರೀತಿ ನಿನ್ನದು
ಸಾಲದು ಪದಗಳು ಬಣ್ಣಿಸಲು ನಿನ್ನನು
ಬಾರೋ ಒಮ್ಮೆ ಅಪ್ಪಿಕೊಂಡು ಮುದ್ದಿಸು ಜೀವ ಕಣ್ಮುಚ್ಚುವ ಮುನ್ನ ಬಂಧಿಯಾಗು!!
✍️ ಪುಷ್ಪ ಪ್ರಸಾದ್