ಬಾರೋ ಗೆಳೆಯ
ಬಾರೋ ಗೆಳೆಯ
1 min
273
ಬರೆಯ ಬಾರೋ ಗೆಳೆಯ
ಒಲವಿನ ಪ್ರೇಮ ಕವಿತೆಯ
ಗಾನ ಲಹರಿಯ ನೀ ಹರಿಸುತ್ತಾ
ಸೇರು ಬಾ ಎನ್ನೆದೆಯ ಗೂಡ!!
ಮನವಿಂದು ಏಕೋ ಗುನುಗುತಿದೆ
ನಿನ್ನ ಸೊಗಸಾದ ಕಾವ್ಯ ಪ್ರೇಮವಿಲ್ಲದೆ
ಹಾಡು ಬಾರೋ ನೀ ಗೆಳೆಯ
ನಿನ್ನ ಇಂಪಾದ ಸ್ವರಲಾಲಿತ್ಯ!!
ಕರೆಯುತಿದೆ ನನ್ನ ಮನವಿಂದು
ಸನಿಹ ನೀ ಬರಬೇಕು ಎಂದು
ದಾರಿ ಕಾಯುತಿದೆ ಒಲವಿಂದು
ನಿನ್ನ ಹೃದಯದರಮನೆ ಸೇರಲೆಂದು!!
✍️ ಪುಷ್ಪ ಪ್ರಸಾದ್