"ಜಗತ್ ರಕ್ಷಕ "
"ಜಗತ್ ರಕ್ಷಕ "

1 min

172
ಜಗವ ನಡೆಸೋ ನಾಯಕ,
ಕೈ ಹಿಡಿದು ನಡೆಸೋ ಪಾಲಕ,
ಕೊಳಲನು ಉದುತಾ,
ಲೋಕವ ನ್ಯಾಯವ ಕಿರು ಬೆರಳಲೇ ನಡೆಸುವ,
ಜಗತ್ಪಾಲಕ ಶ್ರೀ ,,ಶ್ರೀ ,,ಶ್ರೀ ಲೋಕದ ಧರ್ಮ ರಕ್ಷಕ,
ತಿರುಗುವ ಭೂಮಿ ತಾಯಿಯ ಮಡಿಲಲಿ ಮಲಗಿ,
ಆನ೦ದದಿ ನಿದ್ರಿಸೋ ಲೋಕ ಸ೦ಚಾರಕ,
ಆಸೆಯ ಬೀಜವ ಬಿತ್ತಿಸಿ,
ಚಿಗುರನು ಮೊಟಕುಗೊಳಿಸುವ ಧರ್ಮಭೋಧಕ,
ಲಾಲನೆ-ಪಾಲನೆ ನಿನ್ನೆದುರಲೆ
ತು೦ಬಿ ತುಳುಕಿದ ಅನ್ಯಾಯದ ಧರ್ಮ ಜ್ವಾಲನೆ,
ಮುಷ್ಟಿ ಅ೦ಗೈಯಲಿ ಅನ್ಯಾಯವ ಹೊಸಕುವ ಧರ್ಮ ಸ೦ಸ್ಥಾಪಕ,
ಮೊಗದಲೇ ನಗುವಿನ ಹೂವನು ಅರಳಿಸೋ ಸೃಷ್ಟಿ ಕರ್ತಕ