STORYMIRROR

Pushpa Prasad

Others

3  

Pushpa Prasad

Others

ಜಗದ ಸೃಷ್ಟಿ ಹೆಣ್ಣಿವಳು

ಜಗದ ಸೃಷ್ಟಿ ಹೆಣ್ಣಿವಳು

1 min
197

ಸಂಸಾರ ಸಾಗರದಲ್ಲಿ ಮಿಂದವಳು

 ಮನೆಯಲ್ಲಿ ಸಂತಸದಿ ಜ್ಯೋತಿ ಬೆಳಗುವಳು ಅಲೆಗಳಂತೆ ಬರುವ ನೋವಲಿ ಬೆಂದವಳು

 ಎಲ್ಲರಿಗೂ ಉಪಕಾರಿ ಹೆಣ್ಣಿವಳು!!


 ಮಮತೆಯ ಮಡಿಲ ತುಂಬಿದವಳು

 ಸಕಾರಾತ್ಮ ಸದ್ಗುಣವ ಹೊಂದಿದವಳು

 ನಂಬಿಕೆಯ ಕಳಸವ ತುಂಬಿದವಳು ಹಿರಿಕಿರಿಯರಿಗಾಸರೆಯಾಗುವ ಹೆಣ್ಣಿವಳು!!


 ಪತಿಯ ಇಚ್ಛೆಯರಿತು ಜೀವ ಕೊಡುವಳು

 ಹೆಗಲಿಗೆ ಹೆಗಲು ಕೊಟ್ಟು ಬಾಳುವಳು

ಆರ್ಥಿಕತೆಯ ಅರಿತ ಮನೆಯೊಡತಿ ಇವಳು

ಮನೆ ಮನಕೆ ಕಣ್ಣಾಗಿರುವ ಹೆಣ್ಣಿವಳು!!


 ಸಮಾಮುಖಿಯಾಗಿ ಜನ ಸೇವೆಗೈಯುವಳು

 ಭೇದ ಮರೆತು ಎಲ್ಲರಲಿ ಬೆರೆಯುವಳು

 ಎಲ್ಲಾ ರಂಗದಲ್ಲಿಯೂ ಸಾಧನೆಗೈಯುವಳು ಸರ್ವಶ್ರೇಷ್ಟ ಎನಿಸಿಕೊಳ್ಳುವ ಹೆಣ್ಣಿವಳು!!


 ಮುಗಿಲೆತ್ತರ ಹವಣಿಸುವ ಶಕ್ತಿ ಇವಳು

 ಪುರುಷನಂತೆ ಸರಿಸಮವಾಗಿ ನಿಂತಿರುವಳು

 ಎಷ್ಟೇ ನೋವಿದ್ದರೂ ಸಹಿಸಿ ನುಂಗುವಳು

 ದಿಟ್ಟ ಹೆಜ್ಜೆ ಇಟ್ಟ ಜಗದ ಸೃಷ್ಟಿ ಹೆಣ್ಣಿವಳು!!


 ✍️ ಪುಷ್ಪ ಪ್ರಸಾದ್


Rate this content
Log in