STORYMIRROR

Prabhakar Tamragouri

Others

2  

Prabhakar Tamragouri

Others

ಈಗೇನೂ ಉಳಿದಿಲ್ಲ .........

ಈಗೇನೂ ಉಳಿದಿಲ್ಲ .........

1 min
138

ಮಟ ಮಟ ಮಧ್ಯಾಹ್ನ 

ಕಾದ ಕಡಲ ತೀರದಿ 

ಮಳಲ ಹಾಸಿನ ಮೇಲೆ 

ಮೂಡಿದ ಹೆಜ್ಜೆ ಗುರುತುಗಳು 

ಅಲೆಯ ರಭಸಕ್ಕೆ ಅಳಿಸಿಹೋಯಿತು 

ಬೆಸ್ತರ ಬಲೆಯ ಜಾಲದ 

ಕುಣಿಕೆಗೆ ಸಿಲುಕಿ 

ಜೀವ ತೆತ್ತ 

ಅಮಾಯಕ ಮೀನಿನ ಹಾಗೆ !!


ಪಶ್ಚಿಮ ದಿಗಂತದಲ್ಲಿ 

ಇಂಚಿಂಚಾಗಿ ಕರಗುವ 

ಕೆಂಪು ಸೂರ್ಯನ ಮುಸ್ಸಂಜೆ ( ಇಳಿಸಂಜೆ )

ಎದೆ ತೆರೆದು ಪಿಸುಗುಟ್ಟುವ 

ಮುಗ್ಧ ಹೃದಯಗಳು 

ಕತ್ತಲು ಕಳೆಯುವ ಹೊತ್ತಿಗೆ 

ಸುಳಿಗೆ ಸಿಕ್ಕು 

ಇಟ್ಟ ಹೆಜ್ಜೆಯ ಹುಡುಕುತ್ತಾ 

ಮೆಲ್ಲನೆದ್ದವರು ......

ಸುಂಕವಿಲ್ಲದೆ ಬಂದ ದಾರಿಗೆ 

ಮರಳುವ ಕಡಲ ಅಬ್ಬರದಲೆಗಳು 

ಈಗ ಶಾಂತ !

ಅಳಿಸಿ ಹೋದ ಚಿತ್ರದಂತೆ 

ಈಗೇನೂ ಉಳಿದಿಲ್ಲ .......

ಭಗ್ನ ಪ್ರೇಮಿಗಳ ಹಾಗೆ !


Rate this content
Log in