STORYMIRROR

Prabhakar Tamragouri

Others

2  

Prabhakar Tamragouri

Others

ಹಸಿರು ಮರದ ಕೆಳಗೆ

ಹಸಿರು ಮರದ ಕೆಳಗೆ

1 min
114

ದಟ್ಟ ಹಸಿರಿನ ಮರದ ಕೆಳಗೆ ತೊಟ್ಟಿಕ್ಕುವ ಇಬ್ಬನಿ ಸೋನೆಹೊರಟ ಸೂರ್ಯನ ಕಿರಣಕ್ಕೆ ವಿರಮಿಸಲು ನಿನ್ನ ಜೊತೆ ಯಾರಿದ್ದಾರೆ .......?

ಕೋಗಿಲೆಯ ಇಂಪಾದ ಕುಹೂ ....ಕುಹೂ ....ಆಲಿಸುವವರು ಯಾರು .....?ಇಲ್ಲಿ ನಿಮಗೆ ವೈರಿಗಳಿಲ್ಲ ಇಲ್ಲಿ ನಿಮಗೆ ಸಿಗುವುದು ಚಳಿಗಾಲದ ಬೆಚ್ಚನೆಯ ಹವೆಯು !

ಯಾರು ತನ್ನ ಆಸೆಗಳನ್ನೆಲ್ಲಾ ಅದುಮಿಟ್ಟು ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡಲು ಬಯಸುವರೋ ,ಅಲ್ಲಲ್ಲಿ ಉದುರಿಬಿದ್ದ ಹಣ್ಣುಗಳನ್ನು ಹೆಕ್ಕಲು ಬರುವರೋ ,ಇಲ್ಲಿ ಯಾವುದು ದೊರೆಯುವುದೋ ,ಅದರಲ್ಲಿ ತೃಪ್ತಿ ಪಡೆಯುವರೋ ,ಅವರು ಇಲ್ಲಿಗೆ ಬನ್ನಿ .....ಯಾಕೆಂದರೆ ,ಇಲ್ಲಿ ನಿಮಗೆ ವೈರಿಯು ಸಿಗಲಾರ ಇಲ್ಲಿ ನಿಮಗೆ ಸಿಗುವುದು ಚಳಿಗಾಲದ ಬೆಚ್ಚನೆಯ ಹವೆಯು .....!


Rate this content
Log in