STORYMIRROR

Prabhakar Tamragouri

Others

3.4  

Prabhakar Tamragouri

Others

ಹಣತೆ

ಹಣತೆ

1 min
801



ಮನೆಗೆ ಬೆಳಕನು ತುಂಬಿಬೆಳಗುತಿದೆ

ಹಣತೆಗಳು ಊರಿನ ತುಂಬ ,

ದೇಶದಲ್ಲೆಲ್ಲಲಕ್ಷ ಲಕ್ಷ ದೀಪಗಳು ……


ಮನೆ , ಮನದಂಗಳವನ್ನುಗುಡಿಸಿ ,

ಸಾರಿಸಿರಂಗವಲ್ಲಿ ಇಟ್ಟುಸುತ್ತಲಿನ

ಕತ್ತಲುದಾರಿ ತಪ್ಪಿಸದಿರಲು

ಹೊಸ್ತಿಲಲ್ಲಿಹಣತೆಯ ದೀಪ

ಹಚ್ಚಿಟ್ಟುಕಾಯುತಿರುವೆ ಹೂಚೆಲ್ಲಿ ನಿನಗಾಗಿ


ನಮ್ಮೊಳಗಿನ ಅಂಧಃಕ್ಕಾರವನ್ನು

ಕಿತ್ತುಮನದಂಗಳವ ಗುಡಿಸಿಕೊಳೆಯ

ರಾಶಿಯ ತೊಳೆದುನಡೆಯೋಣ

ಭವಿಷ್ಯದ ಪಥದಲ್ಲಿಹೊಸ ಆಸೆಗಳ

ಗಿಡನೆಟ್ಟುಹೊಸ ಚೈತನ್ಯ ಸ್ಫೂರ್ತಿಯಿಂದ


ಬೆಳಗು ಬೆಳಗು ಬಯಲು ತುಂಬ

ಒಲವ ತರುವ ಹೃದಯ

ತುಂಬಪ್ರಖರ ತರುವ ಬಿಂಬ

ನೀನುಆದರೂ….. ,ಮನದಲೊಳಗೆ ಕತ್ತಲೇಕೆ …..?


ಮರಳಿ ಬಾ ಜ್ಞಾನೇಶ್ವರದೀಪ

ಬೆಳಗಿ ಮಬ್ಬನಳಿಸಿಜ್ಞಾನ ಜ್ಯೋತಿ

ಮನದಲ್ಲಿರಿಸಿನಿನ್ನ ಹೆಜ್ಜೆಯ

ಸದ್ದಿನಿಂದಲೇನನ್ನ ಹೃದಯದಲ್ಲಿ

ಸಂತಸದ ಹಣತೆ ಬೆಳಗೀತು !


ಈ ಹಬ್ಬದ ರಾತ್ರಿಯಲ್ಲಿತನ್ನೊಡಲ

ಕಿಡಿಯಿಂದಸಾಲು ಸಾಲು ಹಣತೆಗಳೊಡಲ

ಬೆಳಗಿಸುವಕಿರು ಹಣತೆಮನ ಬೆಳಗಿಸಬೇಕು !


Rate this content
Log in