ಹೀಗೂ ಆಗಬಹುದೇ
ಹೀಗೂ ಆಗಬಹುದೇ
1 min
33
ಮೊದಮೊದಲು ನಾ ಹೀಗಿರಲಿಲ್ಲ
ತುಸು ಹೊಸ ಬದಲಾವಣೆ ಮೆಲ್ಲ...
ಮನೆಯೊಳಗೆ ಬಂದಿಯಾಗಿ
ತಿಂಗಳೈದು ಆಯ್ತಲ್ಲ.....
ನಿಜವಾಗಿಯೂ.....
ಮೊದಮೊದಲು ನಾ ಹೀಗಿರಲಿಲ್ಲ.....
ಬಿಡಿ ನಾನಂತೂ ಸೋಮಾರಿ...
ಎಲ್ಲಿಂದ ಬಂತು ಈ ಮಹಾಮಾರಿ
ಊಹಿಗೂ ಮೀರಿದ ಲಾಕ್ ಡೌನ್
ಇದ ಕೇಳಿ ಎಲ್ಲರ ನಗುವಿನ ಬ್ಯಾಟರಿ ಡೌನ್
ಬೆಳ್ಳಂಬೆಳಗ್ಗೆ ಕಾಲೇಜಿ ಗೆ ಹೋದರೆ
ಬರುವುದು...ಕತ್ತಲಾದ ಮೇಲೆಯೇ....
ಆದರೀಗ ಬೆಳಗೆಯೂ..ಕತ್ತಲೆಯೂ....
ಮನೆಯೊಳಗೆಯೇ.....
ಬದಿಗಿಟ್ಟ....ಪುಸ್ತಕಗಳೆಲ್ಲವನೂ...
ಓದುವ.....ಮನಸಾಗಿದೆ.....
ಎತ್ತಿಟ್ಟ...ಬಣ್ಣಗಳನು....ರಂಗೇರಿಸುವ
ಕನಸು..ಮತ್ತೇ..ನನಸಾಗಿದೆ....
ಗೊಂದಲದ...ನಡುವೆಯೂ
ಒಳಗೊಳಗೆ...ನಗುವ....ಮನಸು
ಮತ್ತೇ......ಬೆನ್ನೇರಿದೆ.......
ನಿಜವಾಗಿಯೂ....
ಮೊದಮೊದಲು ನಾ ಹೀಗಿರಲಿಲ್ಲ....
