ಹಾರಬೇಕು ಹಕ್ಕಿಯಂತೆ
ಹಾರಬೇಕು ಹಕ್ಕಿಯಂತೆ
1 min
11.7K
ಕಣ್ಣು ಹಾಯಿಸಿದಷ್ಟೂ ತಿಳಿನೀಲಿ ಆಕಾಶ
ಹಾರಬೇಕು ಹಕ್ಕಿಯಂತೆ ಸಾವಕಾಶ
ನೊಂದಿದೆ ಮೈಮನ ಹಂಗಿಸುತಿದೆ ಜೀವ
ಕನಸು ಬಿತ್ತಿದರೂ ಬೆಳೆಯದ ಹೊಸಭಾವ
ತಿಳಿದಿದೆ ಜೀವನವೊಂದು ದುಃಖದ ನಾಟಕ
ನಟನೆ ಮಾಡಿದರೆ ಮಾತ್ರ ಬದುಕು ಸಾರ್ಥಕ
ನೀಡಿದ ಭರವಸೆಗಳು ಹುಸಿಯಾಗಿವೆ
ಇಟ್ಟ ನಂಬಿಕೆಗಳು ಮಾಯವಾಗಿವೆ
ಸಾಕಾಗಿದೆ ಬದುಕಿನಲ್ಲಿ ಸೆಣಸಾಟ
ಆಕ್ರೋಶ ಹೊರಬಿದ್ದರೆ ಆಗುವುದು ಸ್ಪೋಟ
ಹಾರಬೇಕು ಹಕ್ಕಿಯಂತೆ ಗರಿಯ ಬಿಚ್ಚಿ
ಅಂತರಂಗವ ತೆರೆದಿಟ್ಟಂತೆ ನಗಬೇಕು ಮನಸ್ಸು ಬಿಚ್ಚಿ