Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Others

2.6  

Prabhakar Tamragouri

Others

ಚುಕ್ಕಿಗಳ ರಾಶಿಯಲ್ಲಿ….

ಚುಕ್ಕಿಗಳ ರಾಶಿಯಲ್ಲಿ….

1 min
206


ಶಬ್ದ ಪಂಜರದಲ್ಲಿಭಾವ ಹಕ್ಕಿಯ ಹಿಡಿದುಕಾವ್ಯ ಕನಸನುನಾನು ಹೆಣೆಯುತ್ತಿದ್ದೆಕಲ್ಪನೆಯ ಮಧುರ ನೆನಪುಗಳನಿರಿಸಿಸೃಜನ ಸುಖದಲಿನಾ ನಿನ್ನ ಮರೆತಿದ್ದೆಯಾವುದೋ ಘಳಿಗೆಯಲಿಹಕ್ಕಿ ಗೂಡುಬಿಟ್ಟು ಹಾರಿತುನನ್ನ ಅರಿವಿಗೆ ಬಾರದೆಅಸ್ಥಿಪಂಜರದಂತೆ ಗೂಡು ಉಳಿದಿತ್ತುಪದಗಳೇ ಕಳಚಿದವು ಹಾಡಿನಿಂದ

 


ಹಕ್ಕಿ ಹಾರಿಹೋದ ಚಿಂತೆನನ್ನ ಮುತ್ತುತ್ತಿದ್ದಂತೆಮೇಲೆ ಮುಗಿಲಲ್ಲಿಹಕ್ಕಿ ಹಾರಾಡುತ್ತಿತ್ತುಇಲ್ಲಿ ಖಾಲಿಯ ಗೂಡುಅಲ್ಲಿ , ನೀಲಿ ಬಾನುನನ್ನ ದೃಷ್ಟಿಅದರ ಬೆನ್ನು ಹಿಡಿದಿತ್ತುನನ್ನ ಕಣ್ಣನ್ನುನನಗೇ ನಂಬಲಾಗಲಿಲ್ಲನೋಡು ನೋಡುತ್ತಲೇಹಕ್ಕಿ ಮಾಯವಾಯ್ತು

ಹಕ್ಕಿ ಮರೆಯಾಗುತ್ತಲೆಹಕ್ಕಿಗಳು ಮೂಡಿದವುಒಂದಲ್ಲ ,ಎರಡಲ್ಲ………..ಎಣಿಕೆ ಮೀರಿದ್ದುಶಬ್ದ ಪಂಜರ ದಾಟಿಮುಗಿಲಿಗೆ ಹಾರಿದ ಹಕ್ಕಿಚುಕ್ಕಿಗಳ ರಾಶಿಯಲ್ಲಿಒಂದು ಚುಕ್ಕಿಯಾಯ್ತುಮುಗಿಲು ಬರೆಯಿತು ಕವಿತೆಚಂದ್ರ ಶೀರ್ಷಿಕೆಯಾದಮಿನುಗುವ ಚುಕ್ಕೆಯ ಲೋಕ ಕಾವ್ಯವಾಯಿತು !


 




Rate this content
Log in