STORYMIRROR

Prabhakar Tamragouri

Others

2  

Prabhakar Tamragouri

Others

ಚೈತ್ರದಲಿ

ಚೈತ್ರದಲಿ

1 min
94

ಮೂಡಣದ ಮರೆಯಲ್ಲಿಹೊಂಬೆಳಕ ಮಳೆಯಲ್ಲಿಭಾಸ್ಕರನ ಯುಗರಶ್ಮಿಗಳು

ಚೈತ್ರ ಬಟ್ಟೆಯ ತೊಟ್ಟುಜಗದ ಪದತಲದಾಚೆ ಮೈ ಚೆಲ್ಲಿದೆ.

ಹರುಷದ ಹಸಿರುಕೊಂಬೆಗಳನ್ನಪ್ಪಿ ಬಂದಾಗ

ಆಕಾಶದೆತ್ತರದ ಬಯಕೆಗಳ ಕನಸುಗಳುಚಿಲಿಪಿಲಿಸಿ ರೆಕ್ಕೆ ಚಾಮರ ಬೀಸಿಮುಗುಳು ನಗೆ

ಸೂಸಿನಗೆ ಬಟ್ಟಲೊಳಗೆ ಚುಂಚು ತೂರಿಹೀರಿಕೊಳ್ಳುತ್ತವೆ ದಕ್ಕಿದಷ್ಟು ಹಾಲು...!

ಬಾನೆದೆಯ ಅಂಗಳದಬಿರಿದ ನಕ್ಷತ್ರ ಮೊಗ್ಗಿನ ಹಂಬಲಕೆಹಾರಿ ಹೊರಳುತ್ತವೆಮಾಮರದ ಕೊಂಬೆಯಲಿ

ಮಲ್ಲಿಗೆಯ ಲತೆಯಲ್ಲಿದುಂಬಿಗಳ ಝೇಂಕಾರಕೋಗಿಲೆಗಳಾಲಾಪ ಸವಿಯುತ್ತಾಸೃಷ್ಟಿ ಸುಧೆ ತಲೆದೂಗಿದೆ.

ಯುಗಾದಿಯ ಶುಭ ಚೈತ್ರದಲಿಅಜ್ನಾತದ ಆಳಕ್ಕೆ ಬೇರುಗಳು ಬಿಟ್ಟುನೆಲಕಚ್ಚಿ ನಿಂತ ಗಿಡದ

ಹಸಿರೊಡಲಲ್ಲಿಮೊಗ್ಗರಳಿ ಹೂವಾಗಿಬಂದ ಬಿರುಗಾಳಿಚಳಿ ಮಳೆಯನುಂಡುಹುದುಗಿದ್ದ ಭೂರಮೆಯಸುಂದರ ಕವಿತೆಗಳು ಬಿರಿಯುತ್ತವೆ...!!


Rate this content
Log in