ಬೊಗಸೆ
ಬೊಗಸೆ
1 min
14
ಕೆನೆಹಾಲ ನುಣುಪಂತೆ ಅವಳ ಕೆನ್ನೆ
ಇಹುದು ಗಲ್ಲದಳೊಂದು ಕಪ್ಪು ಚಿನ್ಹೆ
ಬೊಗಸೆ ಕಂಗಳಲ್ಲಿ ಪ್ರೀತಿಯ ಸನ್ನೆ
ಕೇಳದು ನನ್ನ ಮನ ನನ್ನ ಮಾತನ್ನೇ!!
ಅವಳ ಮೊಗವೋ ಶಶಿಯ ಸೊಗಸು
ಅಳುತ್ತಿದ್ದರೆ ಮನಸಾಗುವುದು ಕೂಸು
ಅವಳಿಗಿದೆ ಸ್ವಚ್ಛವಾದ ಮನಸು
ಗರಿಬಿಚ್ಚಿ ನಾಟ್ಯ ಮಾಡುವುದು ಕನಸು!!
ಒಪ್ಪಿಗೆ ಸೂಚಿಸಿಬಿಡು ನೀ ಒಮ್ಮೆ
ತೊಡಿಸುವೆ ನಿನ್ನ ಕಾಲಿಗೆ ಕಾಲ್ಗೆಜ್ಜೆ
ನೀ ನನ್ನೊಂದಿಗೆ ಒಟ್ಟಿಗೆ ಕುಳಿತರೆ
ಹುಡುಕಬಹುದು ಪ್ರೀತಿಯ ನಾವಿಬ್ಬರೇ!!
✍️ ಪುಷ್ಪ ಪ್ರಸಾದ್ ಉಡುಪಿ
