ಬದುಕಿನ ಪುಟ
ಬದುಕಿನ ಪುಟ


ಬದುಕಿನ ಪುಟದ
ಬಿಳಿಯ ಹಾಳೆಯ ಮೇಲೆ
ಬಿದ್ದ ಕರಿ ನೆರಳು
ಮಸುಕಾಗಿವೆ ಸಾಲಿನ
ಎಲ್ಲಾ ಅಕ್ಷರಗಳು
ಬಣ್ಣದ ಬಾಲ್ಯದಲ್ಲಿ
ಬಿತ್ತಿದ ಕನಸಿನ ಬೀಜಗಳು ಮೊಳಕೆಯೊಡೆದು
ಬೆಳೆಯದೇ ನಿಂತಿವೆ
ಹೊಸ ಆಸೆಗಳು ಕಾರಣವಿರದೇ
ಬೀಸಿದ ಗಾಳಿಯ ರಭಸಕ್ಕೆ
ಸಿಕ್ಕು ನಲುಗಿವೆ
ಮೃದು ಜೀವಗಳು
ಆರಿದ ದೀಪದ
ಸುತ್ತಲಿನ ಬೆಳಕಿನಲ್ಲಿ
ದಾರಿ ಹುಡುಕಿದೆ. ಮೌನದ ನಲುಮೆ
ಮೋಡ ಮುಸುಕಿದ
ಆಗಸದ ಅಂಗಳದಲ್ಲಿ
ಅನಾಥವಾಗಿ ಬಿದ್ದಿರುವ
ಒಂಟೆ ತಾರೆಗೆ ಆಶ್ರಯ ನೀಡಿದೆ
ಯಾಂತ್ರಿಕ ಕರುಣೆ
ಮಂಜು ಹನಿಗಳ ದಾರಿಯ ಮೇಲೆ
ಕಾಣದ ಕೈಗಳ ಸುಡು ಬಿಸಿಲಿನ
ನಡು ಬೀದಿಯಲ್ಲಿ
ಇನ್ನೂ ನಡೆದಿದೆ ರಂಗಿನಾಟ.......