ಬಾನ ಕಡಲು
ಬಾನ ಕಡಲು
1 min
6
ಸದ್ದಿಲ್ಲದೇ ಮಳೆ ಮಾತನಾಡುತಿದೆ
ಕಿಟಕಿಯಿಂದಾಚೆ ಮೋಡಗಳಿಂದ!!
ಮೆಲ್ಲನೆ ಉರುಳುರುಳಿ ಅರಿವಿಲ್ಲದೆ
ತಂದೆರೆಚುತಿದೆ ಹನಿಹನಿಗಳಿಂದ!!
ಸುತ್ತೆಲ್ಲ ಆವರಿಸಿದೆ ನೀರವ ಮೌನ
ಏನಿದು ಮಬ್ಬು ಕವಿದ ವಾತಾವರಣ!!
ಹಗಲು ಇರುಳು ಇಂದೆಂತ ಮಾಯೆ
ಚಡಪಡಿಕೆ ಶುರುವಾಗಿದೆ ಈ ಮಳೆಗೆ!!
ಏನು ವಿಷ್ಮಯ ಗಗನವ ನೋಡಲು
ಬಾನ ಕಡಲಲ್ಲಿ ಸುರಿಯೋ ತುದಿಮೊದಲು!!
✍️ ಪುಷ್ಪ ಪ್ರಸಾದ್ ಉಡುಪಿ
