STORYMIRROR

Pushpa Prasad

Others

4  

Pushpa Prasad

Others

ಬಾಳಸಂಗಮದಲಿ ಹೆಣ್ಣುಗಂಡಿಗಿರಲಿ ಸಮಪಾಲು

ಬಾಳಸಂಗಮದಲಿ ಹೆಣ್ಣುಗಂಡಿಗಿರಲಿ ಸಮಪಾಲು

1 min
392

ಮನೆಯೊಳಗೆ, ಹೊರಗೆ ದುಡಿಯುವ ಹೆಣ್ಣೇ 

ನಿನಗಿಲ್ಲ ಬಿಡು ತಿಂಗಳ ರಜೆ, ಯಾವುದೇ ಭತ್ಯೆ

ಹೆಣ್ಣಾದ ನೀನು ಹಗಲಿರುಳು ಜೀತಕ್ಕಿರುವ

ಬಿಡುವಿಲ್ಲದೆ ಕಾಯಕನಿರತ ದುಡಿಯುವ ಯಂತ್ರ!! 


ತಾಳ್ಮೆಯ ದಾರ ತುಂಡಾಗಿ ಬರುವ ದುಃಖಕ್ಕೆ 

ಕಣ್ಗಳಲ್ಲಿ ಗಳಗಳನೆ ಹರಿಯುವ ನೀರಿನ ಆತಂಕದಿ

ಕತ್ತಿಗೆ ಕಟ್ಟಲಾಗಿದೆ ಬಿಗಿಯಾದ ತಾಳಿ ಮನಕೆ ಸರಪಳಿ 

ನಿಷ್ಠೆ ಎಂಬುದು ಸಂಪ್ರದಾಯಕವಾದ ಬಳವಳಿ!!


ಅಷ್ಟೊಂದು ನಿರಾಡಂಬರವಲ್ಲ ವಿಮೋಚನಾ ಹಾದಿ

ಪ್ರತಿ ಹೆಣ್ಣಿನ ಸುತ್ತಲೂ ಗಂಡಸಿನ ಆಳ್ವಿಕೆಯ ಪರಿಧಿ 

ಎದ್ದು ನಿಂತರೆ ವಿಡಂಬನೆ ಜಾರಿ ಬಿದ್ದರೆ ಕೀಟಲೆ 

ಹೆಜ್ಜೆ ಹೆಜ್ಜೆಗೂ ಏನಾಗುವುದೋ ಎಂಬ ದಿಗಿಲು!!


ಹುಸಿಯಲ್ಲ ಹೆಂಗಳೆಯರ ಬಾಳು ತಂತಿ ಮೇಲಿನ ನಡಿಗೆ

ಮನ ಮೈಮರೆತು ಜಾರಿದರೆ ಶ್ವಾನ ಮುಟ್ಟಿದ ಮಡಕೆ 

ಹೆಣ್ಣು ದೇಹದ ಸುತ್ತ ದುಷ್ಟ ಮನಸುಗಳ ಚಿತ್ತ

ಬುಸುಗುಡುವ ಆಸೆಯ ಅಗ್ನಿ ಎತ್ತನೋಡಿದರತ್ತ!!


ಅವಮಾನಿಸುವ ಸಮಾಜ, ಶೀಲ ಶಂಕಿಸುವ ಬಾಂಧವರು

ವೇಷ ಮರೆಸಿ ಯಾಮಾರಿಸುವ ನೀಚ ಮನುಷ್ಯರು 

ಬೀದಿಗಳಲಿ ಚುಡಾಯಿಸುವ ಕೊಳೆತ ಮನಸುಗಳಿರುವಾಗ 

ಸ್ತ್ರೀಕುಲಕೆಲ್ಲಿದೆ ರಕ್ಷೆ? ಹೆಣ್ಣಾಗಿ ಜನಿಸಿರುವುದೇ ಇಲ್ಲಿ ಶಿಕ್ಷೆ!!


ಕಟ್ಟಾಜ್ಞೆಯನು ಬೇಧಿಸದೇ ಬದುಕಿಲ್ಲ ಬೇರೆ

ಪುರುಷರೆಲ್ಲ ತಲ್ಲಣ ಕ್ಷಮಯಾ ಧರೀತ್ರಿ ಮುನಿದರೆ 

ಹರಿವ ನದಿ ತಡೆಹಿಡಿಯಲು ಕಟ್ಟಲಿ ಆಣೆಕಟ್ಟು

ಸಹನೆ ಮೀರಿದರೆ ಅಡೆತಡೆಗಳೆಲ್ಲ ಹೊಂಡದ ಸಂತೆ!!


ಮಹಿಳೆಯರ ದಿನ ಗಂಡಸರ ಗೌರವದ ಮಾತು

ಒಮ್ಮೆಯಾದರೂ ಕೇಳಬೇಕು ಸವಿಬೆಲ್ಲದ ಮಾತು 

ಅರಿತುಕೊಂಡರೆ ಜಗದಗಲ ಚೆಂದದ ಬಾಳು

ಬಾಳಸಂಗಮದಲಿ ಹೆಣ್ಣುಗಂಡಿಗಿರಲಿ ಸಮಪಾಲು!!


✍️ ಪುಷ್ಪ ಪ್ರಸಾದ್ ಉಡುಪಿ 


Rate this content
Log in