ಅವಳು ಶಕ್ತಿ ಸ್ವರೂಪಿಣಿ
ಅವಳು ಶಕ್ತಿ ಸ್ವರೂಪಿಣಿ


ಹೆಣ್ಣೆಂದರೆ ಅವಳು,
ಬ್ರಹ್ಮಾಂಡ ಶಕ್ತಿ ಸ್ವರೂಪಿಣಿ
ಹೆಣ್ಣೆಂದರೆ ಅವಳು ಕಷ್ಟದಲೂ
ನಗುಮೊಗದಿ ಎಲ್ಲರನೂ ಸಲಹುವಾ
ಅಮೃತವರ್ಷಿಣಿ.....!!
ಹೆಣ್ಣೆಂದರೆ ಅವಳು,
ನೋವಾದರೂ ನಗುವವಳು,
ತನ್ನ ಹಸಿವ ಮುಚ್ಚಿಟ್ಟು
ತನ್ನವರ ಉದರವ ಪೊರೆಯುವವಳು...!!
ಹೆಣ್ಣೆಂದರೆ ಅವಳು,
ತನ್ನೆರಡು ಕೈಗಳಲಿ ಹತ್ತು ಕೈಗಳ
ಕಾಯಕವ ನಿಭಾಯಿಸುವವಳು
ಮನೆಯ ತೇರನು ಹೊರುವ
ಬಹುಮುಖ್ಯ ಗಾಲಿಯಿವಳು....!!
ಹೆಣ್ಣೆಂದರೆ ಅವಳು,
ಎಲ್ಲರಂತೆ ಒಂದು ಜೀವ
ಎಲ್ಲರೊಳೊಂದಾಗುವ ಭಾವ
ಹಿಡಿ ಪ್ರೀತಿ ನೀಡಿದರೆ ತನ್ನೊಳಗಿನ
ಸಕಲ ಪ್ರೀತಿ ಮಮತೆಯನ್ನೂ
ಧಾರೆಯೆರೆಯುವವಳು.....!!