STORYMIRROR

Prabhakar Tamragouri

Others

2  

Prabhakar Tamragouri

Others

ಅವಳ ಹೆಜ್ಜೆ

ಅವಳ ಹೆಜ್ಜೆ

1 min
160

ಕ್ಷಣ ಕ್ಷಣಗಳು ಕಾಲಚಕ್ರದ ತಳ ಸೇರುತ್ತಿದ್ದರೂ ಅವಳು ಮಾತ್ರ 

ತನ್ನದೇ ಗೂಡು ಕಟ್ಟಿಕೊಂಡು ಬದುಕನ್ನು ರೂಪಿಸಲು ಶ್ರಮಿಸುತ್ತಿದ್ದಾಳೆ ತನ್ನ ಸೆರಗಿನಂಚಿನಲ್ಲಿ 

ಅವಿತ ಮನದ ಭಾವನೆಗಳನ್ನು ಕಣ್ಣು ಹನಿಗಳಲ್ಲಿ ಅದ್ಧಿತಿಕ್ಕಿ ತೀಡಿದ ಎಳೆಯನ್ನುಸೂಜಿಗೆ ಪೋಣಿಸಿ ಕಸೂತಿ ಮಾಡುತ್ತಾ ಒಂದಕ್ಕೊಂದು  ಹೊಸ ನೆಲೆಯನ್ನು ಶೋಧಿಸುತ್ತಿದ್ದಾಳೆ !


ಬೆಳಕು ಕತ್ತಲೆ ಮಧ್ಯೆ ಕುಳಿತು ಅದೆಷ್ಟೋ ಅವಳ ಹೋರಾಟದ ಹೆಜ್ಜೆ ಗುರುತುಗಳ ಮೇಲೆ ಕೆಂಧೂಳಿ ಬಣ್ಣ ತುಂಬಿದ್ದರೂ ಮತ್ತೆ ಮತ್ತೆ ಹೊಸ ಹೆಜ್ಜೆಯ ಗುರುತುಗಳು ಮೂಡುತ್ತಲೇ ಇವೆ 

ಅವಳ ಮನ ಕಲಕುವವರ ಎದೆಗೆ ಕಿಚ್ಚು ಹಚ್ಚಲು 

ಅವಳ ಕಾಲ್ಗೆಜ್ಜೆ ನಾದ ಸಪ್ತ ಸಾಗರದಾಚೆ ಧ್ವನಿಸುವ ಹಾಗಿದೆ ಈಗ , ಅಂತರಾತ್ಮದಲ್ಲಿ

ಬಚ್ಚಿಟ್ಟುಕೊಳ್ಳದ ಅವಳು ತನ್ನವರ ಮೇಲಾಗುವ ದೌರ್ಜನ್ಯವನ್ನು ಹತ್ತಿಕ್ಕಲು ಹೊಸ ಸಂವೇದನೆಗಳನ್ನು ಹುಡುಕುತ್ತಿದ್ದಾಳೆ ಪ್ರತಿಭಟಿಸಲು ...!


Rate this content
Log in