Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Others

3.7  

Prabhakar Tamragouri

Others

ಅಘನಾಶಿನಿ

ಅಘನಾಶಿನಿ

1 min
236



ಸೇತುವೆಯ ಕೆಳಗೆ

ರಭಸದಿಂದ ತುಂಬಿ ಹರಿಯುವ 

ಕೆಂಪು ರಾಡಿಯ 

ನಿನ್ನೊಡಲ ನೋಡುತ್ತಾ

ನನ್ನನ್ನೇ ನಾನು ತೆರೆದುಕೊಳ್ಳುತ್ತಾ

ನನ್ನಂತೆ ನೀನೋ ....? ಅಥವಾ ,

ನಿನ್ನಂತೆ ನಾನೋ ....?

ಅರಿಯದೇ ಹೋಗುತ್ತಿದ್ದೇನೆ ಅಘನಾಶಿನಿ


ನಿನ್ನೊಳಗೆ ನನ್ನ ನೋಡಿದಾಗ

ನಾನು ನೀನು ಬೇರೆಯಲ್ಲ ಅನಿಸಿದ್ದೇಕೆ ?

ಹರಿಯುವಾಗಿನ ನಿನ್ನ ಕಲರವ

ನನ್ನದೇ ನಗು ಅನಿಸಿದ್ದೇಕೆ ?

ನಡುವೆಲ್ಲೋ ನಿನ್ನ ಮೌನ

ನನ್ನೊಳಗಿನ ಸುಪ್ತಗಾನ ಅನಿಸಿದ್ದೇಕೆ ?


ಎಲ್ಲೋ ನೀ ಧುಮ್ಮಿಕ್ಕುವಾಗ

ನನ್ನೊಳಗಿನ ಭಾವನೆಗಳ

ಮಹಾಪೂರ ಅನಿಸಿದ್ದೇಕೆ ?

ನೀನು ಕಡಲ ಸೇರಲು

ರಭಸದಿಂದ ಹರಿವಾಗ

ನನ್ನ ಪ್ರೀತಿಯ ನೆನಪಾದುದೇಕೆ ?

ಸಾಗರದೊಡಲ ಸೇರಿದೊಡನೆ

ನಿನ್ನ ನೀನು ಮರೆತಾಗ

ನನ್ನ ಪ್ರೀತಿಯ ನೆನೆದು ಕೆಂಪಾದುದ್ದೇಕೆ ?

ಅರಿಯದೇ ಹೋಗುತ್ತಿದ್ದೇನೆ ಅಘನಾಶಿನಿ !


ನಿನ್ನೊಡಲ ನೋಡುತ್ತಾ

ನನ್ನನ್ನೇ ನಾನು ತೆರೆದುಕೊಳ್ಳುತ್ತಾ

ನನ್ನಂತೆ ನೀನೋ ,

ನಿನ್ನಂತೆ ನಾನೋ ....?

ಅಂತ ಅನಿಸುವಾಗ 

ನನ್ನ ಕೊಡುಕೊಳ್ಳುವಿಕೆಯ ಪರಿ

ನಿನ್ನ ಏನೂ ಬಯಸದೇ

ಪ್ರೀತಿ ಹರಿಸುವ ಪರಿ

ಮನದೊಳಗೆಲ್ಲೋ ಮಿಂಚಿನಂತೆ ಹೊಳೆದು

ನೀನೆಲ್ಲಿ ....? ನಾನೆಲ್ಲಿ .....?

ಅನಿಸಿದ್ದು ಸುಳ್ಳಲ್ಲ ಅಘನಾಶಿನಿ ....!!


Rate this content
Log in