Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shiqran Sharfuddin

Others

5.0  

Shiqran Sharfuddin

Others

ಆ ಹೊತ್ತು ಆಗಮಿಸುತ್ತಿ ದೆ...

ಆ ಹೊತ್ತು ಆಗಮಿಸುತ್ತಿ ದೆ...

1 min
81


ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ,

ಬೆಚ್ಚಿ ಬೀಳುವ ಕೆಲವು ಸಂಜ್ಞೆಗಳು

ಜನಸಮೂಹದ ಮುಂದೆ, ಹಿಂಜರಿಯದೆ,

ಅನಿಷ್ಟಸೂಚಕ ವರ್ತನೆಗಳೊಂದಿಗೆ

ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು,

"ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅರಿವು

ನಿಮಗಿದೆಯೇ?"

ತರುವಾಯ ಸ್ಥಗಿತಗೊಂಡ ಸಂಶಯವು,

ಪ್ರಚೋದಿಸಿತು ನನ್ನನ್ನು ಚಿಂತನಾಗ್ರಸ್ಥನಾಗಲು...


ಓಹ್ ಹೌದು...! ಮತ್ತು ಆ ಸಂಜ್ಞೆಗಳು,

ಪ್ರತಿಯೊಬ್ಬರು ಅರಿಯಲೇ ಬೇಕು.

ಆದ್ದರಿಂದ, ಆ ದುರ್ದೆಶೆಗಳು ಸಂಭವಿಸುವ ಮೊದಲೇ,

ಅವರು ಅವುಗಳನ್ನು ಗುರುತಿಸಬಹುದು!


ಮತ್ತು ಆ ಹೊತ್ತು ಲಜ್ಜೆಯಿಲ್ಲದೆ ಪ್ರತಿಪಾದಿಸುತ್ತಿತ್ತು;

ವಿಶ್ವಾಸಾರ್ಹರನ್ನು ಸುಳ್ಳುಗಾರರನ್ನಾಗಿ,

ಮತ್ತು ದ್ರೋಹಿಗಳನ್ನು ಪ್ರಾಮಾಣಿಕವಾದಿಗಳನ್ನಾಗಿ!

ಅಪರಾಧಿಗಳು ಶಾಸಕರಾಗುವುದನ್ನು,

ಮತ್ತು ನ್ಯಾಯ ತೀರ್ಪುಗಳ ಮೇಲೆ ಧನದ ಪ್ರಭಾವ ಬೀರುವುದನ್ನು!

ಸುಳ್ಳುಗಾರರ ಮಾತುಗಳು ಉತ್ಸುಕತೆಯಿಂದ ಕೇಳಲಾಗುವುದನ್ನು,

ಮತ್ತು ನೀತಿಬೋಧೆಗಳು ಬಹಿರಂಗವಾಗಿ ನಿರಾಕರಿಸಲಾಗುವುದನ್ನು!

"ಇವುಗಳೇ ಆ ಹೊತ್ತಿನ ಸಂಜ್ಞೆಗಳು"


ಕೇಳಿ ಕಿವುಡರೇ!ಸಮಯ ತ್ವರಿತವಾಗಿ ಹಾದು ಹೋಗುತ್ತಿದೆ...

ಕೊನೆಗೂ, ಹಿಂದೆ ನುಡಿದ ಆ ಹೋತ್ತಿನ ಸಂಜ್ಞೆಗಳು ಈಗ ಕಾಣಸಿಗುತ್ತದೆ...

ಖ್ಯಾತ ವಂಚಕರು ಮಾರುಕಟ್ಟೆಗಳನ್ನು ನಿಯಂತ್ರಿಸುವುದು,

ಮತ್ತು ಸಿಂಹಾಸನಗಳನ್ನು ಕಪಟಿಯರಿಂದ ಅಲಂಕರಿಸಲಾಗುವುದು;

ಬಡ್ಡಿಭರಿತ ಸಾಲಯೋಜನೆಗಳು ಜಗತ್ತನ್ನು ಆಳುವುದು,

ಬಡವರನ್ನು ಇನ್ನೂ ಬಡವರಾಗಿ ಮತ್ತು ಧನಿಕರನ್ನು ಇನ್ನೂ ಧನಿಕಗೊಳಿಸುವುದು;

ರಾಸಾಯನಿಕಗಳು ಆಕಾಶದಿಂದ ವರ್ಷಿಸುವುದು,

ಮತ್ತು ಮಳೆಗಳು ಶಾಪವಾಗಿ ಬರಗಳನ್ನು ಫಲಿಸುವುದು;

"ಇವುಗಳೇ ಆ ಹೊತ್ತಿನ ಸಂಜ್ಞೆಗಳು"


ಇಗೋ ಮಾನವಕುಲದವರೇ! ಕಣ್ಣುಗಳನ್ನು ತೆರೆದು ನೋಡಿ!

ಅಂತರ್ಜಾಲದ ವಾಹಿನಿಗಳು ಬಿಡುವಿಲ್ಲದೆ ಕಾರ್ಯಶೀಲಗೊಂಡರೂ,

ರಕ್ತಸಂಬಂಧಗಳು ಕಾರಣವಿಲ್ಲದೆ ಛಿದ್ರಗೊಳ್ಳುತ್ತಿರುವುದು!

ವಿಶಾಲವಾದ ಪ್ರಪಂಚವು ಕುಗ್ಗಿ ಜಾಗತಿಕ ಗ್ರಾಮವೊಂದಾಗಿದ್ದರೂ,

ಅಸ್ವಸ್ಥ ನೆರೆಯವರನ್ನು ಭೇಟಿಸಲು ಪುರುಸೊತ್ತು ಇಲ್ಲವಾಗುತ್ತಿರುವುದು!

ಇದೊಂದು ಕಾಲಕ್ಕೆ ಅಪಾಯಕಾರಿ ಬೆದರಿಕೆಯಾಗಿದೆ:

ಗಗನಚುಂಬಿ ಕಟ್ಟಡಗಳ ವಾಸ್ತುಶಿಲ್ಪವು ಅಲಂಕಾರಿಕ ವಿನ್ಯಾಸ ಹೊಂದರೂ,

ವೃದ್ಧ ಹೆತ್ತವರು ವ್ರದ್ಧಾಶ್ರಮಗಳಲ್ಲಿ ಕೊಳೆಯುತ್ತಿರುವುದು!

"ಇವುಗಳೇ ಆ ಹೊತ್ತಿನ ಸಂಜ್ಞೆಗಳು"


ಪುಸ್ತಕಗಳು ಇದ್ದಕ್ಕಿದ್ದಂತೆ ಹೇರಳವಾಗುವುದು,

ಆದರೂ, ಅನಕ್ಷರತೆ ಎಲ್ಲದೆಡೆಗೆ ಹರಡುವುದು;

ಶತಮೂರ್ಖರಿಗೆ ಮಾನ-ಮರ್ಯಾದೆ ದೊರೆಯುವುದು,

ಮತ್ತು ವಿದ್ವಾಂಸರ ಸಲಹೆಗಳು ತಳ್ಳಿ ಹಾಕಲಾಗುವುದು;

ಲೌಕಿಕ ಲಾಭಕ್ಕಾಗಿ ಜ್ಞಾನವನ್ನು ಕಲಿಯಲಾಗುವುದು,

ಮತ್ತು ಕಪಟಿ ಬೋಧಕರ ಸಂಖ್ಯೆಯೂ ಏರುವುದು;

ಅಲ್ಲದೆ, ತಮ್ಮದೇ ಆದ ಉಪದೇಶಗಳನ್ನು ತಮ್ಮ ಬದುಕಿನಲ್ಲಿ

ಅನುಸರಿಸಲು ಬೋಧಕರೇ ವಿಫಲರಾಗುವುದು;

"ಇವುಗಳೇ ಆ ಹೊತ್ತಿನ ಸಂಜ್ಞೆಗಳು"


ಸಂಗೀತಗಳಿಗೆ ಹೆಜ್ಜೆಹಾಕುವವರನ್ನು ಪ್ರೋತ್ಸಾಹಿಸಲಾವುದು...

ಮತ್ತು ದಿವ್ಯ ಧರ್ಮೋಪದೇಶಗಳನ್ನು ನಿರ್ಲಕ್ಷಿಸಲಾಗುವುದು;

ಕೇಶ ವಿನ್ಯಾಸಗಳು ಅನಿರೀಕ್ಷಿತವಾಗಿ ಮುಳ್ಳು ಹಂದಿಗಳನ್ನು ಹೋಲಿಸಲಾರಂಭವಾಗುವುದು...

ಮತ್ತು ಗಂಡಸರು ಹೆಂಗಸರಾಗುವುದು ಮತ್ತು ಹೆಂಗಸರು ಗಂಡಸರಾಗುವುದು;

"ಇವುಗಳೇ ಆ ಹೊತ್ತಿನ ಸಂಜ್ಞೆಗಳು"


ಆ ಹೊತ್ತು ತನ್ನ ಘೋರ ನೆರಳು ಬೀರುವ ಮೊದಲು,

ಸಮಯದಲ್ಲಿರುವ ಕೃಪೆಗಳು ಮಾಯವಾಗಿ, ಸಮಯ ಕುಗ್ಗುವುದು.

ವರ್ಷಗಳು ತಿಂಗಳಿನಂತೆ ಮತ್ತು ತಿಂಗಳು ವಾರದಂತೆ...

ವಾರಗಳು ದಿನಗಳಂತೆ ಮತ್ತು ದಿನಗಳು ಗಂಟೆಗಳಂತೆ...

ಗಂಟೆ 'ಸುಡುವ ಎಲೆ'ಯಂತೆ ಕಳೆದು ಹೋಗುತ್ತದೆ!

"ಇವುಗಳೇ ಆ ಹೊತ್ತಿನ ಸಂಜ್ಞೆಗಳು"


ಅವರು ಕಿವುಡರು, ಮೂಕರು ಮತ್ತು ದ್ರಷ್ಟಿ ಹೀನರು;

ನೂರಾರು ಸಂಜ್ಞೆಗಳು ತೋರಿದ ಬಳಿಕವೂ,

ಪಶ್ಚಾತ್ತಾಪ ಪಡೆದು ಸದ್ಮಾರ್ಗಕ್ಕೆ ಹಿಂದಿರುಗುವುದಿಲ್ಲ!

ಅವರೇ ಆ ಹೊತ್ತನ್ನು ಆಳುವರು!!!

ಇವುಗಳಲ್ಲಿ ಯಾವ್ಯಾವ ಸಂಜ್ಞೆಗಳನ್ನು ನೀವು ನಿರಾಕರಿಸುತ್ತೀರಿ?

ವಾಸ್ತವವಾಗಿ ಇವುಗಳೇ

ಪ್ರಾಜ್ಞ ವಿವೇಕಿಗಳಿಗೆ ಪುರಾವೆಗಳು!

ಆ ಹೊತ್ತು ಶೀಘ್ರವೇ ಆಗಮಿಸುತ್ತಿದೆಂದು!!!


Rate this content
Log in