STORYMIRROR

Shiqran Sharfuddin

Others

2  

Shiqran Sharfuddin

Others

ಗಝಲ್

ಗಝಲ್

1 min
3.0K

ಸುಲಲಿತವಾಗಿ ಕಳೆದು ಹೋದ ಸ್ವರ್ಣ ದಿನಗಳನ್ನು ಗಮನಿಸಲೇ ಇಲ್ಲ

ಕಳೆದು ಹೋದ ಆ ದಿನಗಳು ವಿಫಲವಾಗಿತ್ತೆಂದು ಗಮನಿಸಲೇ ಇಲ್ಲ! 


ಸಿಹಿವೆಂದುಕೊಂಡ ಕಳೆದ ದಿನಗಳು ನಿಜವಾಗಿ ವಿಷಭರಿತವಾಗಿತ್ತು 

ಆ ದಿನಗಳಲ್ಲಿ ವಿಷ ತುಂಬಿಸಿದವರು ಯಾರೆಂದು ಗಮನಿಸಲೇ ಇಲ್ಲ!


ಬೆಳಗಿಸಿದ ಆ ಹಣತೆ ಉರಿಯಿತೋ ಎಲ್ಲಿಯವರೆಗೆ ಗಮನಿಸಲೇ ಇಲ್ಲ 

ಎಲ್ಲಿಂದ ಪ್ರಾರಂಭಗೊಂಡಿತು ಈ ದಟ್ಟ ಕಗ್ಗತ್ತಲು ಗಮನಿಸಲೇ ಇಲ್ಲ!


ಉಂಡ ವಿಫಲತೆಗಳನ್ನೇ ವ್ಯಕ್ತಪಡಿಸುವುದು ಅಪರಾಧವೆಂದು ತಿಳಿಯಲಿರಲಿಲ್ಲ 

ಮತ್ತು ಆ ವಿಫಲತೆಗಳಲ್ಲಿ ಸಿಕ್ಕಿದ ಅಮೂಲ್ಯ ನೀತಿ-ಮೌಲ್ಯಗಳು ಗಮನಿಸಲೇ ಇಲ್ಲ! 


Rate this content
Log in