Vaishnavi Puranik

Children Stories Inspirational Children

3  

Vaishnavi Puranik

Children Stories Inspirational Children

ಸಾಧಿಸಿದವಳು

ಸಾಧಿಸಿದವಳು

1 min
586


""ಪುಟ್ಟ ಹಳ್ಳಿ ನರಸಾಪುರದಲ್ಲಿ ಮರುಳಪ್ಪ ಮುಗ್ಧಮ್ಮ ದಂಪತಿಗಳಿದ್ದರು. ಹೆಚ್ಚು ವಿದ್ಯಾವಂತರಲ್ಲದ ಅವರು ತಮ್ಮ ಒಬ್ಬಳೇ ಮುದ್ದಿನ ಮಗಳು ಅಚಲಾ ಎರಡನೇ ಬಿ ಎಸ್ಸಿ ಓದುತ್ತಿರುವಾಗ ದೊಡ್ಡ ಆಸ್ತಿವಂತರ ಕುಟುಂಬದ ಹುಡುಗ ಸಿಕ್ಕನೆಂಬ ಆಸೆಯಲ್ಲಿ ದುಶ್ಚಟಗಳ ದಾಸನೆಂದು ಅರಿಯದೆ ಅಮಲೇಶನಿಗೆ ಅವಳ ಇಷ್ಟಕ್ಕೆ ವಿರುದ್ಧವಾಗಿ ಮದುವೆ ಮಾಡಿಕೊಟ್ಟರು. ಅಮಲೇಶ ಅವಳ ಕೈಗೆ ಒಂದು ಹೆಣ್ಣು ಮಗುವನ್ನು ಕರುಣಿಸಿ ಅನಾರೋಗ್ಯಕ್ಕೊಳಗಾಗಿ ಸಾವಿನ ಮನೆ ಹೊಕ್ಕ... ಪೂರ್ಣ ವಿದ್ಯೆಯಿಲ್ಲದ ಅಚಲಾ ಗಂಡ ಬಿಟ್ಟು ಹೋದ ಆಸ್ತಿಯನ್ನು ಇಟ್ಟುಕೊಂಡು ತನ್ನ ಭವಿಷ್ಯದ ಜೀವನವನ್ನು ಹೇಗೆ ಮಾಡಬೇಕೆಂಬುದು ತೋಚದೆ ತಲೆಯ ಮೇಲೆ ಕೈ ಹೊತ್ತು ಕುಳಿತಳು.


ತಲೆಯ ಮೇಲೆ ಕೈ ಹೊತ್ತ ಆಕೆಗೆ ಸಣ್ಣ ಒಂದು ನಿದ್ರೆಯು ಅವರಿಸಿತು. ಆ ನಿದ್ರೆಯಲ್ಲಿ ಆಕೆಗೆ ತನ್ನ ತಾಯಿಯು ನೋಡು ಮಗಳೇ! ನೀನು ಹಿಂಗ ಕುಳಿತರೆ ಆಗದು. ನಿನ್ನಲ್ಲಿ ವಿದ್ಯೆ ಇದೆ. ಅದು ಎಂದೂ ಕಳೆದು ಹೋಗದ ಅಮೂಲ್ಯ ಸಂಪತ್ತು ಎಂದೂ ನುಡಿದ್ದನ್ನು ಕೇಳಿದ್ದನ್ನು ಕೇಳಿ ಹೌದು ಎಂದೂ ನುಡಿಯುವ ಹೊತ್ತಿಗೆ ಆಕೆಗೆ ಎಚ್ಚರವಾಯಿತು. ಎಚ್ಚರವಾಗಿ ಅತ್ತ ಇತ್ತ ನೋಡುವಾಗ ಕೂಸುವು ನಗುವನ್ನು ಬೀರುತ್ತಾ ಇದ್ದಳು. ಹೆಣ್ಣುಮಕ್ಕಳನ್ನು ಕರೆದುಕೊಂಡು ನೇರವಾಗಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಭಕ್ತಿಯಿಂದ ದೇವರೇ ನನಗೆ ಧೈರ್ಯವನ್ನು ಕೊಡಿ ಮತ್ತು ಸಾಧಿಸುವ ಶಕ್ತಿ ಕೊಡಿ ಎಂದೂ ಪ್ರಾರ್ಥನೆ ಮಾಡಿ ನೇರವಾಗಿ ಮನೆಗೆ ಬಂದು ಸಣ್ಣ ಪತ್ರಿಕೆಯಲ್ಲಿ " ಶಿಕ್ಷಣ ಅಭಿಯಾನ " ಎಂದೂ ಶೀರ್ಷಿಕೆ ಕೊಟ್ಟು ತಾನು ನಡೆಸುವ ಕಾರ್ಯಕ್ರಮ ಪಟ್ಟಿಯನ್ನು ಹಾಕಿ ಮನೆ ಮನೆ ಹೋಗಿ ಅಭಿಪ್ರಾಯ ಸಂಗ್ರಹಣೆ ಮಾಡಿ ಆದರ ಜೊತೆಯಲ್ಲಿ ಮಗಳಿಗೆ ವಿದ್ಯಾಭ್ಯಾಸ ನೀಡಿ ಉನ್ನತ ಹುದ್ದೆಯ ಕೆಲಸ ಪಡೆಯುವಂತೆ ಮಾಡಿದಳು.



Rate this content
Log in