Gireesh pm Giree

Children Stories

3.9  

Gireesh pm Giree

Children Stories

ರಾಜನ ಪ್ರೀತಿ

ರಾಜನ ಪ್ರೀತಿ

1 min
80


ಒಂದಾನೊಂದು ಊರಿನಲ್ಲಿ ಒಬ್ಬ ರಾಜನಿದ್ದ. ಅವನು ಊರಿನಲ್ಲಿ ಅತ್ಯಂತ ನಿಷ್ಟಾವಂತ ಪ್ರಭು ಆಗಿದ್ದ. ಬಡವರ್ಗದ ಜನರಿಗೆ ಸಹಾಯ ಮಾಡುತ್ತಿದ್ದ. ತನ್ನ ಆಸ್ಥಾನದ ಎಲ್ಲಾ ಪ್ರಜೆಗಳು ಸಂತಸ ಕ್ಷೇಮದಿಂದ ಇರಬೇಕೆಂದು ಸದಾಕಾಲ ಬಯಸುತ್ತಿದ್ದ. ಸಕಲ ಪ್ರಜೆಗಳ ಮನಸಲ್ಲೂ ಶಾಶ್ವತವಾದ ಸ್ಥಾನವನ್ನು ಪಡೆದಿದ್ದ. ಹೀಗೆ ಪ್ರಜೆಗಳ ಹಿತ ಎನ್ನ ಹಿತ ಎಂದು ಭಾವಿಸಿದ್ದ.


ಹೀಗೆಯೇ ದಿನಗಳು ತುಂಬಾ ಸುಗಮ ದಿಂದ ಹೋಗುತ್ತಿತ್ತು ಹೀಗಿರುವಾಗ ಒಂದು ದಿನ ಊರಿಗೊಂದು ದೊಡ್ಡ ಗಂಡಾಂತರ ಎದುರಾಯಿತು. ಸಾಮ್ರಾಜ್ಯದಲ್ಲಿ ಭೀಕರವಾದ ಮಳೆ ಪ್ರವಾಹ ಎಲ್ಲವೂ ಒಮ್ಮೆಲೆ ಊರಿಗೆ ಸಿಡಿದಂತೆ ಬಂದು ಅಪ್ಪಳಿಸಿತು. ಇದರಿಂದಾಗಿ ಅಪಾರ ಜೀವ ಹಾನಿ ಧನಹಾನಿ ಉಂಟಾಯಿತು. ಇದರಿಂದ ನೊಂದ ರಾಜ ತುಂಬಾ ವ್ಯಥೆ ಪಟ್ಟ. ಹೇಗಾದರೂ ಮಾಡಿ ಈ ಅಪಾಯವನ್ನು ಉಪಾಯದಿಂದ ಪಾರುಮಾಡಬೇಕೆಂದು ಯೋಚಿಸಿದ. ಊರಿನ ಪಂಡಿತರ ಎಲ್ಲರನ್ನೂ ಕರಿಸಿ ಪರಿಹಾರ ಕೇಳಿದ. ಆಗ ಆ ಪಂಡಿತರು ಉಪಾಯವಿದೆ. ಆದರೆ ನೀವು ಮನಸ್ಸು ಮಾಡಬೇಕು.ಆಸ್ಥಾನದ ಸಾಮ್ರಾಟನು ತನ್ನ ಪ್ರಾಣವನ್ನು ತ್ಯಾಗ ಮಾಡಿದರೆ ಮಾತ್ರ ಪ್ರವಾಹವು ಸಂಪೂರ್ಣವಾಗಿ ನಿಲ್ಲುತ್ತದೆ. ಪಂಡಿತರ ಪರಿಹಾರವನ್ನು ಕೇಳಿದ ರಾಜ ಒಂದು ಕ್ಷಣವೂ ಯೋಚಿಸದೆ ತನ್ನ ಪ್ರಾಣವನ್ನು ತ್ಯಾಗ ಮಾಡಿಬಿಟ್ಟ. ತನ್ನ ಊರಿನ ಹಿತವೇ ಎನ್ನ ಹಿತವೆಂದು ಭಾವಿಸಿದ ರಾಜ. ಹಾಗೂ ಊರಿನ ಪ್ರಜೆಗಳ ಹೃದಯದೊಳಗೆ ಶಾಶ್ವತ ಸ್ಥಾನವನ್ನು ಪಡೆದ. ಇದುವೇ ಆ ರಾಜನ ತ್ಯಾಗದ ಕಥೆ.


Rate this content
Log in