nagavara murali

Children Stories Tragedy Others

3  

nagavara murali

Children Stories Tragedy Others

ಪುಟ್ಟಿಯ ಪುಟ್ಟಕಥೆ

ಪುಟ್ಟಿಯ ಪುಟ್ಟಕಥೆ

2 mins
189



ರಾಜಮ್ಮ ಅವಳ ಐದು ವರ್ಷದ ಮಗಳು ಪುಟ್ಟಿ ಇಬ್ಬರೇ ಮನೇಲಿ. ಅಮ್ಮ ಗಾರ್ಮೆಂಟ್ ಫಾಕ್ಟರಿ ಉದ್ಯೋಗಿ. ಬೆಳಗ್ಗೆ ಎಂಟಕ್ಕೆ ಮನೆ ಬಿಟ್ಟರೆ ಬರೋದು ರಾತ್ರಿ ಎಂಟಕ್ಕೆ. ಪಾಪ ತಾನೇ ತಿಂಡಿ ತಿಂದು ನೀರು ಕುಡಿದು ಹೋಮ್ ವರ್ಕೂ ಮಾಡಿ ಮನೆ ಬೀಗಾನು ಹಾಕಿ ಪಕ್ಕದ ಮನೇಲಿ ಬೀಗದ ಕೈ ಕೊಟ್ಟು ನಡ್ಕೊಂಡೇ ಸ್ಕೂಲ್ ಗೆ ಹೋಗ್ಬೇಕು ಪುಟ್ಟಿ. ಸಂಜೆ ಬೆಳಕು ಇರೋವರ್ಗೂ ಹೊರ್ಗೇ ಆಟ ಆಡೋದು ತಪ್ಪು ತಪ್ಪು , ಬೇರೆ ಹುಡುಗೀರು ಆಡೋ ದನ್ನ ನೋಡೋದು ಕತ್ತಲಾದರೆ ಒಬ್ಬಳೇ ದೀಪ ಹಚ್ಚಿ ಮನೇಲಿ ಇರೋದು. ಏನಾದ್ರೂ ಅಡುಗೆ ಮನೇಲಿ ಶಬ್ದ ಆದ್ರೆ ಅಂತೂ ಪಾಪ ಭಯಕ್ಕೆ ಹೊರಗೂ ಹೋಗೋ ಹಾಗಿಲ್ಲ ಒಳಗೂ ಇರೋ ಹಾಗಿಲ್ಲ. ಬಾಗಿಲಲ್ಲೇ ನಿಂತಿ ರೋದು. ಮಳೆ ಬಂದರೆ ಮಾತ್ರ ಭಯ. ಅದಕ್ಕೆ ಪಧ್ಮಕ್ಕ ನ ಮನೆಗೆ ಬಂದು ಅಮ್ಮ ಬರೋವರ್ಗೂ ಕೂತಿರೋ ದು. ಇವರ ಮನೆ ಬಿಟ್ಟರೆ ಇನ್ಯಾರಮನೇಗೂ ಹೋಗ್ಬಾ ರ್ದು ಅಂತ ಹೇಳಿರೋದ್ರಿಂದ ಹೋಗಲ್ಲ.

    ಅಮ್ಮಂಗೆ ಗೊತ್ತಿಲ್ದೇ ಒಂದು ಸಲ ಒಂದು ಆಂಟಿ ಕರೆದ್ರೂ ಅಂತ ಹೋದೆ . ನಿಮ್ಮ ಅಪ್ಪ ಎಲ್ಲಿದಾರೆ . ಬರೋದೇ ಇಲ್ವಾ ನೀನು ನೋಡಿದೀಯಾ ಹೀಗೆ ಅಪ್ಪನ ಬಗ್ಗೆನೇ ಏನೇನೋ ಕೇಳ್ತಾರೆ ಗೊತ್ತಿಲ್ಲ ಅಂದ್ರೆ ಚಾಕ ಲೇಟ್ ಬಿಸ್ಕತ್ ಎಲ್ಲಾ ಕೊಟ್ಟು ಆಸೆ ತೋರಿಸ್ತಾರೆ. ನಂಗೊತ್ತಿಲ್ಲ ಅಂದ್ರೂ ಬಿಡಲ್ಲ. ಇದನ್ನ ಅಮ್ಮಂಗೆ ಹೇಳಿದ್ದಕ್ಕೆ ಚೆನ್ನಾಗಿ ಹೊಡೆದು ಅವಳೂ ಅತ್ತು ಇಬ್ಬರೂ ಏನೂ ತಿನ್ನದೇ ಮಲಗಿದ್ದು ನಾನು ಇಷ್ಟ್ ದಿನಾ ಆದ್ರೂ ಮರ್ತೇ ಇಲ್ಲ. ಅವತ್ತು ಬೆಳಗ್ಗೆ ನೋಡಿದ್ರೆ ಅಮ್ಮ ನಂಗೋಸ್ಕರ ಮಸಾಲೆ ದೋಸೆ ತಂದಿದ್ಲಂತೆ ಕೆಟ್ಟು ವಾಸನೆ ಬರ್ತಿತ್ತು ಅಳ್ತಾನೇ ಬಿಸಾಡಿದ್ಳು ನಮ್ ಹಣೆ ಬರಾನೇ ಇಷ್ಟು ಅಂತ ಹೇಳ್ತಾ.

ಅವತ್ತು ಅಮ್ಮ ಹೋದ್ಮೇಲೆ ದೇವರ ಫೋಟೋ ಮುಂದೆ ನಿಂತ್ಕೊಂಡು ದೇವ್ರ ಹತ್ತಿರ ಹೇಳ್ದೆ. ದೇವ್ರೆ ದೇವ್ರೆ ಇನ್ನೆಂದೂ ಪಧ್ಮಕ್ಕ ನ ಮನೆ ಬಿಟ್ಟು ಯಾರ್ಮನೇಗೂ ಹೋಗಲ್ಲ ಅಮ್ಮಂಗೂ ಹೇಳು ಅಳಬೇಡಾ ಅಂತ .ಹಾಗೇ ಅಪ್ಪನ ಬಗ್ಗೇನೂ ಕೇಳಲ್ಲ ಅಂದಿದ್ದಳಂತೆ.ಅದೇ ಕೊನೆ.


     ಒಂದು ದಿನ ರಾತ್ರಿ ಎಂಟ್ ಗಂಟೆ ಆದ್ರೂ ಅಮ್ಮ ಬಂದಿಲ್ಲ .ಹೆದರಿದ್ದೆ ಯಾಕ್ ಗೊತ್ತಾ ಪಧ್ಮಕ್ಕಂಗೂ ಹುಶಾರಿಲ್ಲ . ಡಾಕ್ಟರ್ ಹತ್ರ ಹೋಗ್ಬರ್ತೀನಿ, ಅಮ್ಮ ಬರೋ ವರ್ಗೂ ಹೊರಗೇ ಕೂತಿರು ಏನ್ ಭಯಾ ಇಲ್ಲ ಅಂತ ಹೇಳಿ ಹೊರಟು ಹೋಗಿದ್ರು. ಅರ್ಧ ಗಂಟೆ ಅದ್ಮೇಲೆ ಬೇಗ ಬೇಗ ಬರ್ತಾ ಇರೋದನ್ನ ದೂರದಲ್ಲಿ ನೋಡಿ ನಾನೇ ಓಡೋದೇ. ಲೇಟಾಗೋಯ್ತಮ್ಮ ಹೊರಗೆ ಇದೀ ಯಲ್ಲ ಭಯಾನಾ ಅಂದಾಗ ಅಮ್ಮನ್ನ ಅಲ್ಲೇ ಗಟ್ಟಿಯಾ ಗಿ ಹಿಡ್ಕೊಂಡೆ. ಕಣ್ಣಲ್ಲಿ ನೀರು ಸುರಿದು ಮಾತಾಡಕ್ಕೆ ನಂಗೆ ಆಗ್ಲಿಲ್ಲ. ಅಮ್ಮ ಯಾರನ್ನೋ ಬೈದು ಎಲ್ಲಾ ಆ ದರಿದ್ರ ಸೂಪರ್ ವೈಸರ್ ನಿಂದ ಇಷ್ಟು ಹೊತ್ತಾಯ್ತು ಅಂತ ಹೇಳಿದಳು. ನಂಗೇನೂ ಅರ್ಥ ಆಗ್ಲಿಲ್ಲ. 


ಮನೆ ಒಳಗೆ ಹೋದ ತಕ್ಷಣ ಎರಡು ಕೈಲಿ ಎರಡು ಸೇಬು 

ಹಿಡಿದು ಕೊಂಡು ಕೂತಳು ಪುಟ್ಟಿ. ಬೆಳಗ್ಗೆ ತಿನ್ನಲೇ ಇಲ್ವಾ ಅಂದದ್ದಕ್ಕೆ ಇಲ್ಲ ಅಂದಳು. ಸರಿ ನನಗೊಂದು ಕೊಡು ನನಗೂ ಸುಸ್ತಾಗಿದೆ ಅಂದಾಗ  ಎರಡನ್ನೂ ಚೂರು ಚೂರು ಕಚ್ಚಿದಳು ಅಮ್ಮಂಗೆ ಕೋಪ ಬಂತು .ಏ ಅನ್ನೋ ಹೊತ್ತಿಗೆ ಬಲಗೈನಲ್ಲಿದ್ದ ಸೇಬನ್ನ ಕೊಟ್ಟಳು. ಏಕೆ ಹೀಗೆ ಮಾಡ್ದೆ ಏನಾಯ್ತು ನಿಂಗೆ ಅಂದಾಗ ಪುಟ್ಟಿ ಹೇಳಿದ್ಳು ಅಮ್ಮ ನನ್ನ ಬಲಗೈನಲ್ಲಿ ಇರೋದು ಸಿಹಿಯಾಗಿದೆ ಎಡಗೈನಲ್ಲಿ ರೋದು ಹುಳಿ ಇದೆ .ನಿನಗೆ ಹುಳಿ ಇಷ್ಟ ಇಲ್ಲ ಅಂತ ಗೊತ್ತು.. ಅದನ್ನ ನೋಡಕ್ಕೆ ಎರಡನ್ನೂ ಕಚ್ಚಿದ್ದು ಅಂದಾಗ. ದೇವರು ಬಲಗೈನಿಂದ ಎಲ್ಲಾ ಕಿತ್ತು ಕೊಂಡ್ರೂ ಏನಾದ್ರೂ ಒಂದು ಎಡಗೈನಲ್ಲಿ ಕೊಟ್ಟಿರ್ತಾನಂತೆ ಅದು ನೀನೇ ನನ್ನ ಪುಟ್ಟಿ ಅಂತ ಹೇಳಿ ಅಪ್ಪಿ ಸಮಾಧಾನ ಮಾಡಿಕೊಂಡಳು ರಾಜಮ್ಮ. ನಿದ್ದೆ ಅಂತೂ ಬರದೆ ಮತ್ತೊಂದು ರಾತ್ರಿ ಕಳೀತು.


Rate this content
Log in