ಪ್ರಶ್ನೆ
ಪ್ರಶ್ನೆ


ಒಂದು ಸಾರಿ ನನ್ನ ಸ್ನೇಹಿತರ ಮೊಮ್ಮಗ ಬೆಂಗಳೂರಿಗೆ ಬಂದಿದ್ದ. ಅವನಿಗೆ ಐದಾರು ವರ್ಷ ವಯಸ್ಸಿರಬಹುದು. ನಮ್ಮ ಮನೆ ಹತ್ತಿರವೇ ಇರುವ ಒಂದು ದೇವಸ್ಥಾನಕ್ಕೆ ಹೋಗುವ ದಾರಿ ಯಾದ್ದರಿಂದ ಮನೆಗೆ ಬಂದಿದಿದ್ದರು . ಅವರೊಂದಿಗೆ ನಾನೂ ಹೊರಟೆ. ಹುಡುಗನಿಗೆ ದೇವಸ್ಥಾನಕ್ಕೆ ಹೋಗುವುದೆಂದರೆಏನೋ ಕುತೂಹಲ . ಬಾಗಿಲಲ್ಲೇ ನೂರೆಂಟು ಪ್ರಶ್ನೆಗಳು ಇಲ್ಲಿ ಹಣೆಮೇಲೆ ಟ್ರೇಡ್ ಮಾರ್ಕ್ ಏಕೆ ಹೊಕ್ಕೊಳ್ತಾರೆ ಪ್ಯಾಂಟ್ ಹಾಕ್ಕೊಂಡು ಟಿ ಶರ್ಟ್ ಏಕೆ ತೆಗಿತಾರೆ ಹೀಗೆ ಉತ್ತರಿಸಲಾಗದ ಹಲವು ಪ್ರಶ್ನೆಗಳು.ಒಳಗೆ ಹೋದಾಗ ಅಭಿಷೇಕ ಮಾಡ್ತಾ ಇದ್ದರು.ಏನದು ಅಂದಾಗ god is taking ಬಾತ್ ಅಂತ ಹೇಳಿದರು. ಸ್ವಲ್ಪ ಹೊತ್ತಿನಲ್ಲೇ curtain ಹಾಕಿದರು. ಮತ್ತೆ ಕೇಳಿದ ಏಕೆ ಕ್ಲೋಸ್ ಮಾಡಿದರು ಅಂತ god is dressing up ಅಂದ ರು. ಅದಕ್ಕವನು ಬಟ್ಟೆ ಇಲ್ಲದೆ ಸ್ನಾನ ಮಾಡೋವಾಗ ಕರ್ಟನ್ ಇರಲಿಲ್ಲ ಆದರೆ ಬಟ್ಟೆ ಹಾಕೊಳ್ಳೋವಾಗ ಏಕೆ ಕರ್ಟನ್ ಅಂದ. ಅವನ ಪ್ರಶ್ನೆಯಲ್ಲಿ ನಿಜವಾಗಿಯೂ ಅರ್ಥವಿತ್ತು. ನಮ್ಮಲ್ಲಿ ಉತ್ತರವಿರಲಿಲ್ಲ ಅಷ್ಟೇ!