ನೆನಪುಗಳು
ನೆನಪುಗಳು
ಕೂಸು ಹುಟ್ಟಿದಾಗ ಯಾರಿಗೆ ತಾನೇ ಸಂತೋಷವಾಗುವುದಿಲ್ಲ. ಅದರಲ್ಲೂ ನಮ್ಮ ಜನತೆಗೆ ಗಂಡು ಮಗನಾದರೆ ಸಾಕು ಎಲ್ಲರ ಮುಖವು ಅರಳುವುದನ್ನು ಕಾಣುತ್ತೇವೆ. ಹೆಣ್ಣು ಕೂಸು ಆದರೆ ಸಾಕು ಅಯ್ಯೋ ನಮಗೆ ಖರ್ಚಿನ ಹೊರೆಯನ್ನು ಹೋರಿಸಲು ಬಂದಳು ಎಂದು ಹೇಳುವವರು.
ಈ ಕುಟುಂಬದಲ್ಲಿ ಬೆಟ್ಟದ ಚಾಮುಂಡೇಶ್ವರಿ ಅಮ್ಮನವರ ಭಕ್ತಿಯ ಮಹಿಮೆಯಿಂದ ಏನೋ ಸಾವಿತ್ರಿಯ ಕುಟುಂಬದವರಿಗೆ ಪುತ್ರಸಂತಾನವು ಆಯಿತು. ಮನೆಯಲ್ಲಿ ಬೀದಿಯಲ್ಲಿ ಸಾವಿತ್ರಿ ಅಮ್ಮನವರಿಗೆ ಪುತ್ರ ಸಂತಾನವಂತೆ ಎಂದು ದೊಡ್ಡ ಧ್ವನಿಯಲ್ಲಿ ಕೇಳಿ ಬರುತ್ತಿತ್ತು. ಊರಿನವರು ನೋಡುತ್ತಾ ಇದ್ದಂತೆ ಕೂಸು ದೊಡ್ಡದಾಗಿ ಈಗ ಉದ್ಯೋಗ ಸೇರುವ ಹಂತದವರೆಗೆ ಬೆಳೆದು ಬಿಟ್ಟಿರುವನು. ಯಾರೇ ದೊಡ್ಡವರು ಬಂದರು ಈ ಕೂಸು ಭಕ್ತಿಯಿಂದ ನಮಸ್ಕಾರ ಮಾಡುವ ಅಮೂಲ್ಯ ಸಂಸ್ಕಾರವನ್ನು ಹೇಳಿಕೊಟ್ಟಿದ್ದರು ಅವರ ಪೋಷಕರು.
ಒಮ್ಮೆ ಹೀಗೆ ಕಾಲವು ಸರಿದಂತೆ, ಅಂಚೆ ಅಣ್ಣವರು ಬಂದು ನಿಮ್ಮ ಕೂಸುವಿಗೆ ವಿದೇಶದಲ್ಲಿ ಓದಲು ಅವಕಾಶಕ್ಕಾಗಿ ಅಲ್ಲಿನ ಅಧ್ಯಾಪಕರು ನಿಮ್ಮ ಕೂಸುವಿಗೆ ಪತ್ರವನ್ನು ಬರೆದಿದ್ದಾರೆ ಎಂದು ನುಡಿದಾಗ ಇತ್ತ ಸಾವಿತ್ರಿ ಅಮ್ಮನವರ ಕಣ್ಣಿನ ಅಂಚಿನಲ್ಲಿ ನೀರು ತುಂಬಿರಲು ಆ ಕೂಸು ಬಂದು ಅಮ್ಮ ಏನು ಆಯಿತು ನಿನ್ನ ರೋದನೆಗೆ ಏನು ಕಾರಣ? ಏನು ಎಂದು ತಿಳಿಸುತ್ತೀರಾ? ಎಂದು ಹತ್ತು ಹಲವಾರು ಪ್ರಶ್ನೆ ಮಾಡಿದಾಗ ಆಕೆಯು ಆ ಕೂಸುವನ್ನು ಗಟ್ಟಿಯಾಗಿ ಹಿಡಿದುಕೊಂಡು ನಮ್ಮ ಇಬ್ಬರನ್ನು ಬಿಟ್ಟು ನೀನು ಎಲ್ಲೂ ಹೋಗದಿರು ಎಂದು ನುಡಿಯುವ ಧ್ವನಿಯನ್ನು ಕೇಳಿಸಿಕೊಂಡ ಆ ಕೂಸುವಿನ ಅಧ್ಯಾಪಕರು ನೋಡು ಸಾವಿತ್ರಿಮ್ಮ ಹೀಗೆ ಹೇಳಿದರೆ ಹೇಗೆ ಇಂತಹ ಒಳ್ಳೆಯ ಅವಕಾಶಗಳನ್ನು ಯಾಕೆ ಬಿಡುತ್ತೀರಾ? ಹೋಗಿ ಬರಲಿ ಎಂದಾಗ ಆಕೆಯು ಮತ್ತೆ ತನ್ನ ಕೂಸುವನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡು..
ಇಲ್ಲ ಇಲ್ಲ ಎಂದು ಹೇಳಿದಾಗ ಊರಿನ ಸಮಸ್ತ ಜನರು ಬಂದು ಅದೇ ರೀತಿಯಾಗಿ ನುಡಿದನ್ನು ಕೇಳಿ ಕೇಳಿ ಆಕೆಯು ಮಲಗಿಕೊಂಡರು ಅದೇ ರೀತಿಯಾಗಿ ಹೇಳುವುದನ್ನು ಕಂಡು ಆಕೆಯ ಪತಿಯು ಆ ಕೂಸುವನ್ನು ಕರೆದು ನೋಡು ನನ್ನಕೆಯು ಅದೇ ಗುಂಗಿನಲ್ಲಿ ಇದ್ದಾಳೆ ನೀನೇ ಆಕೆಗೆ ಧೈರ್ಯ ಹೇಳು ನಾನು ಮರಳಿ ಬರುವೆ ಊರಿಗೆ ಎಂದು ಹೇಳಿದಾಗ ಆಗಲಿ ಅಪ್ಪಾಜಿ ಎಂದು ಅಮ್ಮನನ್ನು ಕರೆದಾಗ ಆಕೆಗೆ ತಡೆಯಲು ಆಗದೇ ವಾಹನದಲ್ಲಿ ಕುಳ್ಳಿರಿ ಹೊರಡಲು ಆಕೆಯು ತನ್ನ ಅಮ್ಮ ಕೊಟ್ಟ ಹೊದಿಕೆ ಕೊಟ್ಟು ಕಳಿಸುವಾಗ ಕಾಲ ಚಕ್ರವು ಉರುಳಿತ್ತು.
ಇತ್ತ ಆ ಕೂಸುವು ಒಳ್ಳೆಯ ಉದ್ಯೋಗ ಪಡೆದು ಇರುವನು. ಇತ್ತ ಊರಿನಲ್ಲಿ ಇವತ್ತು ನಮ್ಮ ಕೂಸು ಬರುತ್ತೆ ನಾಳೆ ಬರುತ್ತೆ ಎನ್ನುವ ಅದೇ ಗುಂಗಿನಲ್ಲಿ ಸಾವಿತ್ರಮ್ಮ ಹಾಸಿಗೆ ಹಿಡಿದುಕೊಂಡು ಇರುವುದನ್ನು ಕಂಡು ಊರಿನ ಮುಖಂಡರು ಆತನಿಗೆ ಪತ್ರ ಬರೆದರೂ ಉತ್ತರ ನೀಡಿದ್ದನ್ನು ಕಂಡ ಊರಿನ ಮುಖಂಡರ ಕಣ್ಣಿನ ಅಂಚಿನಲ್ಲಿ ನೀರು ತುಂಬಿರಲು ಇಬ್ಬರು ಕೂಡ ದೇವರಲ್ಲೇ ಲೀನವಾಗಿ ಬಿಟ್ಟರು.
ಕಾಲ ಸರಿದಿತು.ಆ ಕೂಸುವಿಗೆ ಪತ್ರವು ಸಿಕ್ಕಿ ಬರುವಾಗ ಮನೆಯಲ್ಲಿ ಅಂದು ಹಚ್ಚಿದ ದೀಪವು ಹಾಗೆ ಉರಿಯುತ್ತಿತ್ತು. ಮುಖಂಡರು ದೂರದಲ್ಲಿ ಯಾರೋ ಬರುವುದನ್ನು ಕಂಡು ಯಾರು ಎಂದು ನೋಡುವಾಗ ಅಪ್ಪಾಜಿ ಅಮ್ಮ ಎಂದು ಆ ಕೂಸು ಪ್ರಶ್ನೆ ಮಾಡುವಾಗ ಆ ಮನೆಯಲ್ಲಿ ಹಚ್ಚಿದ ದೀಪವನ್ನು ತೋರಿಸಿದರು.
