STORYMIRROR

Vaishnavi S Rao

Children Stories Classics Inspirational

4  

Vaishnavi S Rao

Children Stories Classics Inspirational

ಕಲಾ ರೂಪ

ಕಲಾ ರೂಪ

2 mins
340

ದೂರದ ಒಂದು ಹೊಳೆಯ ಕಡೆಯಲ್ಲಿ ಪದ್ಯದ ದ್ವನಿ ಕೇಳಿ ಬರುತ್ತಾ ಇದ್ದವು.ಆ ದ್ವನಿಯನ್ನು ಕೇಳಿ ಅಲ್ಲಿಗೆ ಬಂದ ಯುವಕ ಆ ದ್ವನಿಯನ್ನು ಕೇಳುತ್ತಾ ಅಲ್ಲೇ ತಲ್ಲೀನ ಆಗಿದ್ದನು.......... 


             ಅಲ್ಲಿಗೆ ಒಂದು ಸುಂದರವಾದ ಹುಡುಗಿ ಆಗಮನವಾಯಿತು, ಅವರು ಇಬ್ಬರು ಒಬ್ಬರುನೊಬ್ಬರನ್ನು ನೋಡುತ್ತಾ ನಿಂತರು.............


         ಆದರೆ ಇಬ್ಬರು ಮಾತನಾಡಲಿಲ್ಲ, ಆದರೆ ಅವರ ಕಣ್ಣುಗಳು ಹೇಳುತ್ತಾ ಇದ್ದವು. ನಾವು ಯಾವ ಜನುಮ ಒಂದೇ ತಾಯಿಯ ಮಕ್ಕಳು ಆಗಿರಬೇಕು ಎನಿಸತೊಡಗಿದಾಗ ದೊಡ್ಡವರು ಬಂದು ಅವರನ್ನು ಕರೆದುಕೊಂಡು ಹೋದರು......... 


ಮಾರನೇ ದಿನ ಅದೇ ಪದ್ಯ ಕೇಳಿ ಬಂದು ಇಬ್ಬರು ಒಟ್ಟಿಗೆ ಸೇರಿದರು, ಆ ಸಂದರ್ಭದಲ್ಲಿ ದೊಡ್ಡವರು ಬನ್ನಿ ಮಕ್ಕಳೇ ಎಂದು ಕರೆದುಕೊಂಡು ಹೊರಟರು....... 


    ಇಬ್ಬರು ಮಕ್ಕಳಿಗೆ ಬೇಕಾದ ಶಿಕ್ಷಣ ಎಲ್ಲಾ ಮೂಲಭೂತ ಅವಕಾಶವನ್ನು ಕೊಟ್ಟಿದ್ದರು. ಆ ಸಂದರ್ಭದಲ್ಲಿ ದೊಡ್ಡವರು ಒಂದು ನಿರ್ಧಾರಕ್ಕೆ ಬಂದರು............


     ಮದುವೆ ಮಾಡೋಣ ಎಂದು ಕೇಳಿದಾಗ ಆ ಮಕ್ಕಳು ಯಾಕೆ ನಮಗೆ ಒಂದು ಕುಂದುಕೊರತೆ ಇಲ್ಲದಂತೆ ಬೆಳೆಸಿದ್ದು ಯಾಕೆ? ಎಂದು ಕೇಳಿದಾಗ ಅವರು ಕಾಲ ಬಂದಾಗ ನಾನೇ ನಿಮಗೆ ಹೇಳುತ್ತೇನೆ ಎಂದು ಹೇಳಿದರು.........


ಆ ಮಕ್ಕಳು ಸುಮ್ಮನೆರಾದರು. ಆ ಹುಡುಗಿಯನ್ನು ಕರೆದುಕೊಂಡು ಹೋದ ದೊಡ್ಡವರು ಬಂದು, ಸ್ವಾಮಿ ಹೀಗೆ ನನ್ನ ಮಗಳ ಮದುವೆಯನ್ನು ನಿಮ್ಮ ಮಗನ ಜೊತೆಯಲ್ಲಿ ಮಾಡುವುದು ಎಂದು ನಿರ್ಧಾರವನ್ನು ಮಾಡಿದ್ದೇವೆ ಎಂದು ನುಡಿದಾಗ......... 

    ಅಪ್ಪಾಜಿ ಇಬ್ಬರು ಒಟ್ಟಿಗೆ ನಮಗೆ ಒಂದು ಭಾವ ಸೃಷ್ಟಿಯಾಗುತ್ತಾ ಇದೆ ಅದು ಏನು ಎಂದರೆ ನಾವು ಇಬ್ಬರು ಒಂದೇ ತಾಯಿಯ ಕುಡಿಗಳ ಹಾಗೆ ಭಾವಗಳು ವ್ಯಕ್ತವಾಗುತ್ತದೆ ಎಂದು ನುಡಿದಾಗ............ 

     ಆ ಮಕ್ಕಳು ಹಠ ಮಾಡಿದರು ನಮಗೆ ಅಪ್ಪ ಅಮ್ಮ ಯಾರು ಎಂದು ತಿಳಿಸಿ? ಹೇಳಿದಾಗ ಅವರು ಮುಂದೆ ತಿಳಿಯುತ್ತದೆ ಎಂದು ನುಡಿದು ಕೆಲಸಕ್ಕೆ ಸಿದ್ದರಾಗಿ ನಿಂತರು........ 

    ಮಾರನೇ ದಿನ ಆ ಊರಿನ ಹಬ್ಬಕ್ಕೆ ಹೋದಾಗ ಇಬ್ಬರು ದಂಪತಿಗಳು ಆ ಮಕ್ಕಳನ್ನು ಕರೆದು ಬನ್ನಿ ನೀವು ನಿಜವಾದ ಅಣ್ಣ ತಂಗಿಯರು ಎಂದು ನೋಡಿದಾಗ....... 


     ಆ ಮಕ್ಕಳು ಕುತೂಹಲದಿಂದ ನಿಮಗೆ ಹೇಗೆ ತಿಳಿದಿದೆ ಎಂದು ನೋಡಿದಾಗ ಆ ದೊಡ್ಡವರು ಹೇಳಿದರು, ಇವರೇ ನಿಮ್ಮ ತಂದೆ ತಾಯಿಯರು ಇವರು ತೀರ್ಥಯಾತ್ರೆಗೆ ಹೋಗಿದ್ದರು, ಅವರು ಮಕ್ಕಳಿಗೆ ನಾವು ಪ್ರೀತಿಯ ಪರೀಕ್ಷೆ ಮಾಡಿದೆವು ಅದರಲ್ಲಿ ಅವರೇ ಗೆದ್ದರು ಎಂದು ನುಡಿದ್ದನ್ನು ಕಂಡು ಮಕ್ಕಳು ಬೆರಗಾಗಿ ನೋಡುತ್ತಾ ನಿಂತರು........ 

   ಅವರು ಹಾಗೆ ಎಂದರೆ ಏನು ಎಂದು ಪ್ರಶ್ನೆ ಮಾಡಿದಾಗ ಅವರು ಮಕ್ಕಳಿಗೆ ಎಲ್ಲಾ ಸವಲತ್ತು ನೀಡಿದರು ಅವರಿಗೆ ನಾವು ತೋರುವ ಪ್ರೀತಿಯನ್ನು ತೋರಿಸಬೇಕು ಅದು ಕೆಲವು ಸಲ ವ್ಯಕ್ತರಿಕ್ತವಾಗಬಹುದು ಆದರೆ ನಿಮಗೆ ನಾವು ಬೇಕು ಎಂದು ನೋಡಿದನ್ನು ಕೇಳಿ ಸಂತೋಷವಾಯಿತು ಆ ದಂಪತಿಗಳಿಗೆ....... 

   ಮಕ್ಕಳು ಆ ದೊಡ್ಡವರು ಅವರ ಬಳಿ ಕ್ಷಮಿಸಿ ಬಿಡಿ ಎಂದು ಕೇಳಿ ಸಂತೋಷದಿಂದ ಇದ್ದರು. 



Rate this content
Log in