nagavara murali

Children Stories Inspirational Children

3.5  

nagavara murali

Children Stories Inspirational Children

ಅಪ್ಪ ಕಲಿಸಿದ ಪಾಠ

ಅಪ್ಪ ಕಲಿಸಿದ ಪಾಠ

2 mins
118


ಮುತ್ತ ನಾಲ್ಕನೇ ಕ್ಲಾಸ್ ನಲ್ಲಿ ಓದುತ್ತಿದ್ದ. ಇವನಿಗೆ ದಿನವೂ ಎರಡೋ ಮೂರೋ ರೂಪಾಯಿ ಶಾಲೆಗೆ ಹೋಗೋವಾಗ

ಅವರ ಅಪ್ಪ ಕೊಡಬೇಕು. ಶಾಲೆ ಹತ್ತಿರ ಊಟದ ಸಮಯದ ಲ್ಲಿ ಅಂಗಡಿಗೆ ಹೋಗಿ ಏನಾದ್ರು ತಿನ್ನೋದು ಇವನ ಅಭ್ಯಾಸ.


ಒಂದು ದಿನ ಅಪ್ಪ ಕೊಡಲಿಲ್ಲ. ಮುತ್ತನಿಗೆ ಬೇಜಾರಾಯ್ತು . ಅಮ್ಮನ ಹತ್ತಿರ ಹೋಗಿ ಹೇಳಿದ. ಅಮ್ಮಹೋಗಲಿ ಬಿಡು ನಾನೇ ಕೊಡ್ತೀನಿ ಅಂತ ಕೊಟ್ಟಳು . ಮಾರನೇ ದಿನವೂ ಅಪ್ಪ ಕೊಡಲಿಲ್ಲ .ಅಮ್ಮನ ಹತ್ತಿರ ಕೇಳಿದರೆ ಇಲ್ಲ ನಾನೂ ಕೊಡಲ್ಲ ನಿಮ್ಮ ಅಪ್ಪ ಬೈತಾರೆ ಅಂದಾಗ ಅಳುತ್ತಾ ಶಾಲೆಗೆ ಹೋದ. ಮತ್ತೆ ಮಾರನೆದಿನ ಅಮ್ಮ ನ್ನ ಕೇಳದೇ ಇದ್ದರೂ ಹೊರಗೆ ಬಂದು ಎರಡು ರೂಪಾಯಿ ಕೊಟ್ಟು ಅಪ್ಪನಿಗೆ ಹೇಳಬೇಡ ಅಂದಳು. ಇದನ್ನು ಹೇಗೋ ನೋಡಿದ ಅಪ್ಪ ಬಂದು ಅವನ ಕೈನಿಂದ ಕಿತ್ತು ಕೊಂಡು ಪಕ್ಕದಲ್ಲಿ ಇದ್ದ ಭಾವಿಗೆ ಎಸೆದ. ಏಕೆ ಹೀಗೆ ಮಾಡಿದರು ಅಂತ ಹೆಂಡತಿಗೂ ಆಶ್ಚರ್ಯ. ಅಳುತ್ತಾ ಶಾಲೆಗೆ ಹೋದ.


ಮಾರನೇ ದಿನ ರಜ. ಯಾರೋ ನೆಂಟರು ಬಂದಿದ್ದವರು ಇವನಿಗೆ ಚಾಕೋಲೇಟ್ ತೊಗೋ ಅಂತ ಐದು ರೂಪಾಯಿ ಕೊಟ್ಟರು .ಅವರು ಹೋದ ತಕ್ಷಣ ಬಂದು ಆ ಐದುರೂಪಾಯಿ ತೊಗೊಂಡು ಮತ್ತೆ ಭಾವಿಗೆ ಎಸೆದ.ಅಪ್ಪನಿಗೆ ಹುಚ್ಚು ಹಿಡಿದಿದೆ ಅದಕ್ಕೆ ಹೀಗೆ ಮಾಡ್ತಾ ಇದಾರೆ ಅಂತ ತಿಳಿದ. ಒಂದು ಅಂಗ ಡಿಗೆ ಬಂದು ಚಾಕಲೇಟ್ ಕೇಳಿದ. ಅಂಗಡಿಯವನು ಕಾಸು ಕೇಳಿದರೆ ಇಲ್ಲ ಅಂದ.ಆಗ ಅಂಗಡಿಯವನು ಹೇಳಿದ ನಾನು ಹೇಳೋ ಕೆಲಸ ಮಾಡಿದರೆ ಹತ್ತು ರೂಪಾಯಿ ಕೊಡ್ತೀನಿ ಅಂತ ಹೇಳಿ. ಈ ಬ್ಯಾಗ್ ಎದುರುಮನೆಗೆ ಕೊಟ್ಟು ಬಾ ಅಂದ. ಬಂದಮೇಲೆ ಮತ್ತೊಂದು ಮನೆಗೆ ಹೀಗೆ ಎಂಟು ಹತ್ತು ಮನೇಗೆ ಸಾಮಾನು ಕೊಡಲು ಹೇಳಿದ .ಅವನು ಹೇಳಿದ ಹಾಗೆ ಮಾಡಿದ .ಅದಕ್ಕೆ ಹತ್ತು ರೂಪಾಯಿ ಕೊಟ್ಟ. ಓಡಿ ಬಂದು ಅಮ್ಮನಿಗೆ ತೋರಿಸಿ ನಡೆದದ್ದು ಹೇಳಿದ. ಅಪ್ಪ ಬಂದು ಅದನ್ನೂ ಇವನ ಕೈಯಿಂದ ಕಸಿದು ಬಾವಿಗೆ ಎಸೆಯಲು ಹೋದ. ಆಗ ಅಪ್ಪನ ಕಾಲು ಹಿಡಿದು ಅಪ್ಪ ಇದು ನಾನು ಸಂಪಾದನೆ ಮಾಡಿರೋದು. ಎಸೆಯ ಬೇಡ .ಬೇಕಾದರೆ ನೀನೇ ಇಟ್ಟುಕೋ ಅಂದಾಗ. ಅಪ್ಪ ಅವನನ್ನು ಎತ್ತಿ ಕೊಂಡು ಮಗೂ ನಿನ್ನ ಮೇಲೆ ನನಗೆ ಕೋಪ ಇಲ್ಲ. ದುಡ್ಡಿನ ಬೆಲೆ ನಿನಗೆ ತಿಳಿಯಲಿ ಅಂತ ಹಾಗೆ ಮಾಡಿದೆ. ಅಂಗಡಿಯವನು ನನ್ನ ಸ್ನೇಹಿತ . ಅವನು ಫೋನ್ ಮಾಡಿ ಹೇಳಿದಾಗ ನಾನೇ ಏನಾದರೂ ಒಂದು ಪುಟ್ಟ ಕೆಲಸ ಮಾಡಿಸಿ ಕೊಂಡು ಹತ್ತು ರೂಪಾಯಿ ಕೊಡಲು ಹೇಳಿದೆ. ಇದು ನೀನೇ ಸಂಪಾದನೆ ಮಾಡಿರೋದು .ಏನು ಬೇಕಾದರೂ ತೊಗೋ ಅಂದಾಗ ಬೇಡಪ್ಪ ಹತ್ತು ರೂಪಾಯಿಗೆ ನನಗೆ ಒಂದು ಹುಂಡಿ ತಂದು ಕೊಡಿ ಅದರಲ್ಲಿ ಇನ್ನು ಮುಂದೆ ಯಾರೇ ಹಣ ಕೊಟ್ಟರೂ ಅದರಲ್ಲಿ ಹಾಕ್ತೀನಿ. ಹೊರಗಡೆ ಏನೂ ತಿನ್ನಲ್ಲ ಅಂದ .ಅಪ್ಪ ಅಮ್ಮನಿಗೆ ಸಂತೋಷ ಆಯಿತು.



Rate this content
Log in