ವರ ಮರ
ವರ ಮರ
1 min
137
ಕಾಪಾಡೋಣ ಸಲಹೋಣ ನಮ್ಮ ಪರಿಸರ
ಉಳಿಸೋಣ ಬೆಳೆಸೋಣ ಗಿಡಮರ
ನಾವಿಂದು ಇದ್ದೇವೆ ವಿನಾಶದ ಸನಿಹದಲ್ಲಿ
ಸಾವು-ನೋವು ಖಂಡಿತ ಪರಿಸರ ಉಳಿಸದೇ ಹೋದಲ್ಲಿ
ಯುವ ಮನಸ್ಸುಗಳಲ್ಲಿ ಮೂಡಬೇಕು ಪರಿಸರದ ಕಾಳಜಿ
ಅವರೊಳಗೂ ಅರಿಯಬೇಕು ಪರಿಸರ ಕಾಯುವ ಜವಾಬ್ದಾರಿ
ನಾವಿಂದು ನೆಟ್ಟ ಗಿಡವು ನೆರಳಾಗುವುದು ನಮಗೆ
ಆ ನೆರಳೇ ಕಾಯೋದು ಮುಂದೆ ನಮ್ಮ ಜನಾಂಗಕ್ಕೆ
ಕಾಲದ ಋತುಚಕ್ರವು ಸರಿಯಾಗಿ ತಿರುಗುತ್ತದೆಯೇ?
ವರುಷ ವರುಷಕ್ಕೂ ಸರಿಯಾಗಿ ಮಳೆ-ಬೆಳೆ ಆಗುತ್ತದೆಯೇ?
ಮಾನವನ ಬೇಜವಾಬ್ದಾರಿ ತನದಿಂದ ನಶಿಸುತ್ತಿದೆ ಸಸ್ಯಶಾಮಲ
ಮಾನವನಲ್ಲಿ ಮಾಯವಾಗುತ್ತಿದೆ ಪರಿಸರ ಸೃಜನಶೀಲ
ದೇವರು ಕೊಟ್ಟ ವರವೇ ಅಮೂಲ್ಯ ಪರಿಸರ
ಆಧುನಿಕ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿರುವನು ಮಾನವ
ಗಿಡವ ನೀಡುವುದು ನಮ್ಮ ಸಂಸ್ಕೃತಿ ಎಂದು ತಿಳಿಯಿರಿ
ಜೀವ ಸಂಪನ್ಮೂಲಗಳನ್ನು ಉಳಿಸಿ ನಗು ನಗುತ್ತಾ ಬಾಳಿರಿ
