STORYMIRROR

Gireesh pm Giree

Others

4  

Gireesh pm Giree

Others

ವೈದ್ಯೋ ನಾರಾಯಣೋ ಹರಿ

ವೈದ್ಯೋ ನಾರಾಯಣೋ ಹರಿ

1 min
13


ಪ್ರಾಣ ರಕ್ಷಕ ಆರೋಗ್ಯ ಶಿಕ್ಷಕ

ಜೀವ ಕಾಪಾಡುವ ನಾಯಕ

ಜೀವಕ್ಕೆ ನೀವೇ ಆಮ್ಲ ಜನಕ


ವೈದ್ಯೋ ನಾರಾಯಣೋ ಹರಿ

ಈ ಮಾತು ನಿಜಕ್ಕೂ ಸರಿ

ರೋಗ ನಿರ್ಮೂಲನೆ ನಿಮ್ಮ ಗುರಿ

ಆ ಗುರಿ ಬೇಗನೆ ತಲುಪಿಸೋ ಹರಿ


ನಮ್ಮ ರಕ್ಷಣೆ ಮಾಡೋ ಸೈನ್ಯ

ಎಂದೋ ಯಾರ ಬಯಸಿಲ್ಲ ಅನ್ಯ

ನಿಮ್ಮ ನಿಸ್ವಾರ್ಥ ಸೇವೆ ಅನನ್ಯ

ತುಂಬುವುದು ಅದು ನವ ಚೈತನ್ಯ


ಹೆಚ್ಚಾದರೂ ಕೊರೋನಾದ ಹಾರಾಟ

ಎಂದು ಕುಗ್ಗಲಿಲ್ಲ ಚಲದ ಹೋರಾಟ

ಕಡಿಮೆಯಾಗಲಿ ಕೊರೋನ ಕಾಟ

ಬೇಗನೆ ಮುಗಿಸುವ ನಿನ್ನ ಆಟ


Rate this content
Log in