STORYMIRROR

Indushree L E

Others

4  

Indushree L E

Others

ಸಾರ್ಥಕ ಬದುಕು

ಸಾರ್ಥಕ ಬದುಕು

1 min
204

ಜಗದ ಪರಿಚಯ ಅಮ್ಮನ ಒಡಲಲ್ಲಿ

ಜಗದೊಡನೆ ಒಡನಾಟ ಅಪ್ಪನ ಹೆಗಲಲ್ಲಿ

ತುಂಟಾಟ ಒಡನಾಟ ಕಿರಿಯರ ಸಂಗದಲಿ

ಅಕ್ಕರೆಯ ಪ್ರೀತಿಯದು ಹಿರಿಯರ ತೋಳಲ್ಲಿ...


ಬೆಳೆದಿಹುದು ಬಾಂಧವ್ಯ ಸಂಬಧಗಳ ಜೊತೆಯಲ್ಲಿ

ಸೆಳೆದಿಹುದು ಮಮತೆಯದು ಅಜ್ಜಿಯ ಮಡಿಲಲ್ಲಿ

ಅಡಗಿದೆ ಸಂತಸವು ಅಜ್ಜನ ಪ್ರೀತಿಯಲಿ

ನಿಸ್ವಾರ್ಥ ಭಾವವಿದೆ ಗುರುಗಳ ತ್ಯಾಗದಲಿ...


ಗರಿಬಿಚ್ಚಿ ಹಾರುವ ಈ ತುಂಬು ಮನದಲಿ

ಬಂತೊಂದು ಆಸೆಯದು ಸಂಗಾತಿ ಬಯಕೆಯಲಿ

ಭಾವನೆಗಳು ಬೆರೆತು ಶುರುವಾಯಿತೊಸಬದುಕು

ಮನಸೆಲ್ಲವ ಮರೆತಿದೆ, ಸಮರ್ಪಣೆಯ ದಾರಿಯಲಿ...


ಸಾರ್ಥಕವು ಜೀವನ ಮರುಜನ್ಮದೆಸರಿನಲಿ

ಜನಿಸುವಾ ಕೂಸಾ ಮಡಿಲಲ್ಲಿ ಸಲಹುವಲ್ಲಿ

ಜೀವನವು ಕಳೆಯುವುದು ಮಕ್ಕಳ ದಾರಿಯಲಿ

ಸಾಕಿನ್ನು ಈ ಸುಖವು ಈ ಜನ್ಮದಂತ್ಯದಲಿ..



Rate this content
Log in