ರೋಗಾಣು
ರೋಗಾಣು
1 min
82
ಜಗದಲ್ಲಿ ಇಂದು ಬಾರದ ರಣ ರೋಗ
ಕಾಣದ ರೋಗಾಣು ಮನುಕುಲಕ್ಕೆ ಹಾಕಿದೆ ಬೀಗ
ನಮ್ಮ ನಮ್ಮ ಜೀವಕ್ಕೆ ಮುಕ್ತಿ ಯಾವಾಗ?
ದೇವರೇ ನೀನೇ ಗತಿ ನಮಗೀಗ
ಆರಾಮ ಜೀವನಕ್ಕೆ ವಿರಾಮ ಹಾಡಿದ
ಮನುಕುಲವ ನೋವಿಗೆ ದೂಡಿದ
ಮೊಗದಲಿ ಮಂದಹಾಸ ದೂರ ಮಾಡಿದ
ಮನಸಿನ ಕನ್ನಡಿಗೆ ಮಾಸ್ಕ್ ಹಾಕಿದ
ಸಾವಲ್ಲು ಸುಖವಿಲ್ಲ
ನೋವಿಗೆ ಬರವಿಲ್ಲ
ಆದರೂ ಜೀವ ಜೀವನ ಸಾಗದೆ ವಿಧಿ ಇಲ್ಲ
ಕಾಲಕ್ಕೆ ಎಲ್ಲರೂ ತಲೆಬಾಗಲೇ ಬೇಕಲ್ಲ
