STORYMIRROR

Thrineshwara Mysore

Others

4  

Thrineshwara Mysore

Others

ರಾಧೆಯ ಬಿನ್ನಹ

ರಾಧೆಯ ಬಿನ್ನಹ

1 min
23.8K

ಏಕೆ ನಿಂತಿತೋ ಮೋಹನ ದಿನ 

ನಿತ್ಯದಿ ಕೇಳುವ ಮುರಳಿಯ ಗಾನ 

 

ಸುಮಧುರ ಮೋಹಕ ಸುಂದರ ಗಾನ 

ಸಾವಧಾನದಿ ಜಗದಿ ತುಂಬಿಸಿ ಮೌನ  

     

ಬೃಂದಾವನದಿ ನಂದ ಗೋಪಿಯರೆಲ್ಲ 

ಅಂದ ಚಂದದಿ ನಲಿದು ಮೈ ಮರೆತಿಹರು 

ಮೋಹಗೊಂಡಿಹರು ನಿನ್ನ ರಾಧೆ ಯಶೋಧೆಯರು

ಇದರರಿವಿಲ್ಲವೇನೋ ಚಂದಿರವದನ  


ಇಹಪರಗಳಿಗಾಧಾರವು ನಿನ್ನ ಗಾನ 

ತುಂಬುರು ನಾರದರಿಗಿದೆ ನಿತ್ಯ ಧ್ಯಾನ 

ಪಾರ್ಥನಿಗೆ ಭೋದಿಪ ಗೀತೆಯ ಗಾನ 

ತ್ರಿನೇತ್ರಾದಿಗಳು ಕೇಳ್ವರು ಬಿಡದೆ ಅನುದಿನ  



Rate this content
Log in