Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Thrineshwara Mysore

Others

2  

Thrineshwara Mysore

Others

ನಿಜವಾದ ಪ್ರೀತಿ ಎಲ್ಲಿಹುದು?

ನಿಜವಾದ ಪ್ರೀತಿ ಎಲ್ಲಿಹುದು?

1 min
2.8K


ಪ್ರೀತಿಯಲಿ ಆಕರ್ಷಣೆಯುಂಟು, ಆಕರ್ಷಣೆಯೇ ಪ್ರೀತಿಯಲ್ಲ,

ಪ್ರೀತಿಯಲಿ ಸಹಾನುಭೂತಿಯುಂಟು, ಸಹಾನುಭೂತಿಯೇ ಪ್ರೀತಿಯಲ್ಲ,

ಪ್ರೀತಿಯಲಿ ತ್ಯಾಗವುಂಟು, ತ್ಯಾಗವೇ ಪ್ರೀತಿಯಲ್ಲ,

ಪ್ರೀತಿಯಲಿ ದುಮ್ಮಾನವುಂಟು, ದುಮ್ಮಾನವೇ ಪ್ರೀತಿಯಲ್ಲ,

ಪ್ರೀತಿಯಲಿ ಒಡೆತನದ ಒಲವುಂಟು, ಒಡೆತನದ ಒಲವೇ ಪ್ರೀತಿಯಲ್ಲ,

ಅಮೃತದಲಿ ಸಿಹಿಯುಂಟು, ಆದರೆ ಸಿಹಿಯೇ ಅಮೃತವಲ್ಲ;


ಹೃದಯದಲ್ಲಿನ ಪ್ರೀತಿ ಯಾವ ರೂಪದಲ್ಲಿ ವ್ಯಕ್ತವಾದರೇನು?

ಅದಕೆ ಸ್ವಾರ್ಥದ ಹಂಗಿಲ್ಲದಿರಲು ಸದಾ ಪವಿತ್ರವೆನಿಸುವುದು;


ಮನಸು ಯಾವ ರೂಪದಲ್ಲಿ ಪ್ರೀತಿ ತೋರಬಯಸಿದರೂ 

ಸ್ವಾರ್ಥದ ಹಂಗು ಸದಾ ಇರಲಾಗಿ ಕೊನೆಗೆ ಅಪವಿತ್ರವೆನಿಸುವುದು; 


ಪ್ರೀತಿಗೆ ಹೆಸರನಿಡುವುದಾಗಲೀ, ಪ್ರೀತಿಸುವೆನೆಂದು ಹೇಳುವುದಾಗಲೀ 

ಅನುಬಂಧನದಲಿ ಮಿಂದ , ಉದ್ದೇಶಸಹಿತವಾದ ಮನಸಿನ ಮೋಸತನ;


ಹೆಸರಿಡದೆಯೇ, ಹೇಳದೆಯೇ, ಮೌನದಲಿ ಕಾರ್ಯಗೊಳಿಸುವ 

ಹೃದಯದಲಿ ಮಾತ್ರ ಪವಿತ್ರ ಪ್ರೀತಿಗೆ ಆಶ್ರಯವುಂಟು.



Rate this content
Log in